ಚೆನ್ನೈ : ಆರ್ ಸಿಬಿ ತಂಡದ ಸ್ಟಾರ್ ಆಟಗಾರ, ಆಸ್ಟ್ರೇಲಿಯಾ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಐಪಿಎಲ್ ಗಾಗಿ ಸ್ಯಾಮ್ಸ್ ಚೆನ್ನೈಗೆ ಆಗಮಿಸಿದಾಗ ಮೊದಲ ಪರೀಕ್ಷೆಯ ವೇಳೆ ಕೋವಿಡ್ ನೆಗೆಟಿವ್ ಬಂದಿತ್ತು. ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಬಗ್ಗೆ ಆರ್ ಸಿಬಿ ಫ್ರಾಂಚೈಸ್ ಟ್ಟಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದು, ಡೇನಿಯಲ್ ಸ್ಯಾಮ್ಸ್ ಗೆ ಏಪ್ರಿಲ್ 3 ರಂದು ಮೊದಲ ಪರೀಕ್ಷೆಯ ವೇಳೆ ಕೋವಿಡ್ ನೆಗೆಟಿವ್ ಬಂದಿತ್ತು. ಬಳಿಕ ಏಪ್ರಿಲ್ 7 ರಂದು ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಪ್ರಸ್ತುತ ನಿಗದಿಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ಪ್ರತ್ಯೇಕವಾಗಿದ್ದಾರೆ” ಎಂದು ತಿಳಿಸಿದೆ. ಅಲ್ಲದೇ ಆರ್ ಸಿಬಿ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇತ್ತೀಚಿನ ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ನೆಗಟಿವ್ ಬಂದಿದೆ.
ಆರ್ಸಿಬಿ ಏಪ್ರಿಲ್ 9ರಂದು ಆರಂಭವಾಗುವ ಐಪಿಎಲ್ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ದ ಆಡಲಿದೆ.










