ಮೈಸೂರು : ಕಾರಿನ ಟೈರ್ ಸ್ಫೋಟಗೊಂಡು ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ನಡೆದಿದ್ದು, ಗುಣಲಕ್ಷ್ಮಿ(35), ದೈವಿಕ್(12) ಮೃತ ದುರ್ದೈವಿಗಳು.
ಕಾರಿನಲ್ಲಿ ಪತಿ ಜಗದೀಶ್ ಜೊತೆಗೆ ಗುಣಲಕ್ಷ್ಮಿ ಮತ್ತು ಮಗ ದೈವಿಕ್ ಇಂದು ಮುಂಜಾನೆ 4.30ರ ಸಮಯದಲ್ಲಿ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದ ಟೈಯರ್ ಸ್ಫೋಟಗೊಂಡು ಕಾರು ಕಂಬಕ್ಕೆ ಗುದ್ದಿದೆ. ಹೀಗಾಗಿ, ತಾಯಿ ಮತ್ತು ಮಗ ಕಾರಿನಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಕಾರು ಓಡಿಸುತ್ತಿದ್ದ ಜಗದೀಶ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










