ಕಾರು ಅಪಘಾತ ; ಮರಾಠಿ ನಟಿ ಈಶ್ವರಿ ದೇಶಪಾಂಡೆ ದುರ್ಮರಣ…

89
firstsuddi

ಪಣಜಿ : ಮರಾಠಿ ಚಿತ್ರರಂಗದ ಉದಯೋನ್ಮುಖ ನಟಿ ಈಶ್ವರಿ ದೇಶಪಾಂಡೆ(25) ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈಶ್ವರಿ ದೇಶಪಾಂಡೆ ದುರಂತ ಸಾವನ್ನಪಿದ್ದಾರೆ. ಗೆಳೆಯ ಶುಭಂ ದಡ್ಗೆ ಜೊತೆ ಈಶ್ವರಿ ದೇಶಪಾಂಡೆ ಕಾರಿನಲ್ಲಿ ಗೋವಾಗೆ ತೆರಳಿದ್ದರು. ಕಳೆದ ಸೆಪ್ಟೆಂಬರ್ 15ರಂದೇ ಈಶ್ವರಿ ದೇಶಪಾಂಡೆ ಮತ್ತು ಶುಭಂ ದಡ್ಗೆ ಗೋವಾಗೆ ಬಂದಿದ್ದರು.

ವರದಿಗಳ ಪ್ರಕಾರ, ಸೆಪ್ಟೆಂಬರ್ 20 (ಸೋಮವಾರ) ಬೆಳಗ್ಗೆ 5.30 ಸುಮಾರಿಗೆ ಬರ್ದೇಜ್ ತಾಲೂಕಿನ ಅರ್ಪೋರಾ ಅಥವಾ ಹದ್ಫಡೆ ಗ್ರಾಮದ ಸಮೀಪ ಕಾರು ಬಾಗಾ ಕ್ರೀಕ್ ಗೆ (ಬಾಗಾ ತೊರೆ) ಉರುಳಿಬಿದ್ದಿದೆ. ಕಾರು ಲಾಕ್ ಆಗಿದ್ದರಿಂದ ಅದರಿಂದ ಹೊರಬರಲು ಸಾಧ್ಯವಾಗದೇ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

‘ಪ್ರೇಮಾಚೆ ಸೈಡ್ ಎಫೆಕ್ಟ್ಸ್’ ಸಿನಿಮಾ ಮೂಲಕ ಈಶ್ವರಿ ದೇಶಪಾಂಡೆ ಮರಾಠಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಬೇಕಿತ್ತು. ಆದರೆ ಅದು ನೆರವೇರುವ ಮುನ್ನವೇ ಈಶ್ವರಿ ದೇಶಪಾಂಡೆ ಈಶ್ವರಿ ದೇಶಪಾಂಡೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.