ಮುಡಿ ತೆಗೆಸಿಕೊಂಡು ಬರುವ ಭಕ್ತರಿಗೆ ಮಾದಪ್ಪನ ದರ್ಶನಕ್ಕೆ ನಿರ್ಬಂಧ…

76
firstsuddi

ಚಾಮರಾಜನಗರ : ಮುಡಿ ತೆಗೆಸಿಕೊಂಡು ಬರುವ ಭಕ್ತಾಧಿಗಳಿಗೆ ಮಾದಪ್ಪನ ದರ್ಶನಕ್ಕೆ ನಿರ್ಬಂಧಿಸಲಾಗಿದೆ.

ಕೊರೊನಾ ಕಾರಣದಿಂದ ಮುಡಿ ಸೇವೆ ಸೇರಿದಂತೆ ಎಲ್ಲಾ ಸೇವೆಗಳಿಗೂ ಪ್ರಾಧಿಕಾರ ನಿರ್ಬಂಧಿ ದ್ದರೂ, ಭಕ್ತಾಧಿಗಳು ಪ್ರಾಧಿಕಾರದ ಹೊರ ಆವರಣ ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ಬರುವಾಗಲೇ ಬೇರೆ ಕಡೆಗಳಿಂದ ಮುಡಿ ತೆಗೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಮುಡಿ ಮಾಡಿಸಿಕೊಂಡ ಬರುವ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಒಳ ಆವರಣದಲ್ಲಿ ಪ್ರವೇಶ ನಿಷೇಧಿಸಲಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಆದೇಶ ಹೊರಡಿಸಿದೆ. 

ಸದ್ಯ ಈ ಅವೈಜ್ಞಾನಿಕ ಆದೇಶಕ್ಕೆ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.