ಕಾರು, ಬೈಕ್ ಮುಖಾಮುಖಿ ಡಿಕ್ಕಿ ; ಮೂವರು ಸ್ಥಳದಲ್ಲೇ ಸಾವು…

98
firstsuddi

ಬೆಳಗಾವಿ : ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಸಂಗನಕೇರಿ ಬಳಿ ನಡೆದಿದೆ.

ನಿನ್ನೆ ಈ ಘಟನೆ ನಡೆದಿದ್ದು, ಮೃತರನ್ನು ಪಿ.ಜಿ ಹುಣಶ್ಯಾಳ ಗ್ರಾಮದ ನಿವಾಸಿಗಳಾದ ಗೋಪಾಲ ಮುತ್ನಾಳ(36), ರಾಮಣ್ಣ ಮಗ್ಗೆಪ್ಪಗೋಳ(40) ಮತ್ತು ತಳವಾರ ಮೂಡಲಗಿ ತಾಲ್ಲೂಕಿನ ನಾಗನೂರು ನಿವಾಸಿ ನೀಲವ್ವ ತಳವಾರ(44) ಎಂದು ಗುರುತಿಸಲಾಗಿದೆ.

ಮೃತರು ಮೊಹರಂ ಆಚರಣೆಗೆಂದು ಗೋಕಾಕ್ ತಾಲ್ಲೂಕಿನ ಮಕ್ಕಳಗೇರಿ ಗ್ರಾಮಕ್ಕೆ ತೆರಳಿ ದೇವರ ಆಶೀರ್ವಾದ ಪಡೆದು ಮರಳಿ ಬರುವ ಸಂದರ್ಭದಲ್ಲಿ ಗೋಕಾಕ್ ತಾಲ್ಲೂಕಿನ ಸಂಗನಕೇರಿ ಬಳಿ ಕಾರು ಡಿಕ್ಕಿಯಾಗಿ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಗೆ ಡಿಕ್ಕಿಯಾಗಿ ಕಾರು ಸಹ ಪಲ್ಟಿಯಾಗಿದ್ದು, ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.