ರಾಜಸ್ಥಾನ : ಕಳೆದ ಮೂರೂವರೆ ದಶಕಗಳಿಂದ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮಿಗ್-27 ಯುದ್ಧ ವಿಮಾನಗಳು ಶುಕ್ರವಾರ ರಾಜಸ್ಥಾನದ ಜೋಧಪುರ್ನಲ್ಲಿ ತನ್ನ ಕೊನೆಯ ಹಾರಾಟವನ್ನು ನಡೆಸುವ ಮೂಲಕ ಇತಿಹಾಸದ ಪುಟವನ್ನು ಸೇರಿದೆ. ಮಿಗ್-27 ಯುದ್ಧ ವಿಮಾನಗಳು 1999ರ ಕಾರ್ಗಿಲ್ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿ “ಬಹದ್ದೂರ್” ಎಂದು ಬಿರುದನ್ನು ಪಡೆದಿತ್ತು. ಮಿಗ್-27 ಯುದ್ಧ ವಿಮಾನಗಳಿ ವಾಯುಪಡೆಯ ಸಿಬ್ಬಂಧಿಗಳು ಹಾಗೂ ಅಧಿಕಾರಿಗಳು ಸೆಲ್ಯೂಟ್ ಮಾಡಿ ಗೌರವವನ್ನು ಸೂಚಿಸಿ ಬೀಳ್ಕೊಟ್ಟರು. ಭಾರತೀಯ ವಾಯುಸೇನೆಯಲ್ಲಿ ಬರೋಬ್ಬರಿ 35 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುವ ಮಿಗ್ -27 ಯುದ್ಧ ವಿಮಾನಗಳು 87 ನೇ ವಾಯುಪಡೆಯ ದಿನದಂದು ಸೇವೆಯಿಂದ ನಿವೃತ್ತಿ ಪಡೆದಿವೆ.










