ಕಾಲು ಮುರಿದುಕೊಂಡ ನವರಸ ನಾಯಕ ಜಗ್ಗೇಶ್.

67
firstsuddi

ನವರಸ ನಾಯಕ ಜಗ್ಗೇಶ್ ಅವರು ಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ.

ಮುರಿದುಕೊಂಡಿರುವ ಕಾಲಿನ ಫೋಟೋವನ್ನು ಶೇರ್ ಮಾಡಿರುವ ಅವರು, ‘ಸಣ್ಣ ಅಚಾತುರ್ಯ ನಡಿಗೆಯಿಂದಾಗಿ ಕಾಲು ಮುರಿದುಕೊಂಡಿದ್ದೇನೆ. ಪಾದದ ಮೂಳೆ ಮುರಿದಿದೆ. ಆರು ವಾರಗಳ ಕಾಲ ದಿಗ್ಭಂಧನ’ ಎಂದು ಬರೆದುಕೊಂಡಿದ್ದಾರೆ.

ಜಗ್ಗೇಶ್ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಮತ್ತು ಆಪ್ತರು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಅನೇಕರು ವಿಶ್ರಾಂತಿ ಪಡೆಯಿರಿ, ದೇವರ ದಯೆಯಿಂದ ಶೀಘ್ರ ಗುಣಮುಖರಾಗಿ ಎಂದು ನೆಚ್ಚಿನ ನಟನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ.

ಜಗ್ಗೇಶ್ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಅವರ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಸಂತೋಷ್ ಆನಂದ್‌ರಾಮ್ ಸಾರಥ್ಯದಲ್ಲಿ ಬಂದ ರಾಘವೇಂದ್ರ ಸ್ಟೋರ್ ನಿರೀಕ್ಷೆಯ ಗೆಲುವು ದಾಖಲಿಸಿಲ್ಲವಾದರೂ, ಒಂದೊಳ್ಳೆ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಇದೀಗ ಜಗ್ಗೇಶ್ ರಂಗನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು.