ಶ್ರೀನಗರ : ಜೈಷ್-ಎ-ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಐವರು ಪಾಕಿಸ್ತಾನ ಮೂಲದ ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತದ ಕಣಿವೆ ಪ್ರದೇಶದತ್ತ ನುಸುಳಿದ್ದು, ಕಾಶ್ಮೀರದ ಕಣಿವೆ ಪ್ರದೇಶದ ಸುತ್ತ ಮುತ್ತಾ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರತಕ್ಕೆ ನುಸುಳಿರುವ ಉಗ್ರರು ಹೆಚ್ಚು ತರಬೇತುದಾರರಾಗಿದ್ದು, ಇವರು ಬಾರತೀಯ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸಬಹುದು ಎಂಬ ಗುಪ್ತಚರ ಇಲಾಖೆ ಮಾಹಿತಿಯ ಮೇರೆಗೆ ಕೇಂದ್ರ ಸರ್ಕಾರ ಕಳೆದ ಒಂದು ವಾರದಲ್ಲಿ ಕಾಶ್ಮೀರ ಕಣಿವೆ ಪ್ರದೇಶಕ್ಕೆ 28ಸಾವಿರ ಭಾರತೀಯ ಸೈನಿಕರನ್ನು ನಿಯೋಜಿಸಿ ಎಚ್ಚರಿಕೆ ವಹಿಸಿದೆ. ಐವರು ಉಗ್ರರು ಕಣಿವೆ ಪ್ರದೇಶದತ್ತ ನುಸುಳಿರುವ ವಿಷಯ ತಿಳಿಯುತ್ತಿದ್ದಂತೆ ಭಾರತೀಯ ಸೇನಾ ವಾಯುಪಡೆ ಸೂಕ್ಷ್ಮ ಪ್ರದೇಶದತ್ತ ಗಸ್ತು ತಿರುಗುತ್ತಿದ್ದು, ಕಾಶ್ಮೀರದ ನಗರ ಭಾಗಗಳಲ್ಲಿ ಸಿ.ಆರ್.ಪಿ.ಎಫ್ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










