ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಕಾರಿನಲ್ಲಿ ಹಾರ ಬದಲಿಸಿ ಮದುವೆಯಾದ ಪ್ರೇಮಿಗಳು- ಪೋಷಕರಿಂದ ವಿರೋಧ…

53
firstsuddi

ಬಳ್ಳಾರಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಪೇಮಿಗಳು ಕಾರಿನಲ್ಲಿ ಹಾರ ಬದಲಿಸಿ ಮದುವೆಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಶಿವಪ್ರಸಾದ್ ಹಾಗೂ ಅಮೃತಾ ಪ್ರೇಮ ವಿವಾಹದ ಜೋಡಿ. ಕೊಪ್ಪಳ ಮೂಲದ ಯುವತಿ ಅಮೃತಾ ಹಾಗೂ ಬಳ್ಳಾರಿಯ ತೆಕ್ಕಲಕೋಟೆಯ ಯುವಕ ಶಿವಪ್ರಸಾದ್ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಹುಡುಗಿ ಮೇಲಿನ ಜಾತಿ, ಹುಡುಗ ಕೆಳ ಜಾತಿ ಹಿನ್ನಲೆ ಪ್ರೇಮ ವಿವಾಹಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಯುವತಿ ಅಮೃತಾ ಒಂದು ಬಾರಿ ಪೋಷಕರು ಬೇಕೆಂದು, ಮತ್ತೊಮ್ಮೆ ಪ್ರೇಮಿಬೇಕೆಂದು ದ್ವಂದ್ವ ಹೇಳಿಕೆ ನೀಡಿದ್ದಾಳೆ. ಅಮೃತಾ ದ್ವಂದ್ವ ಹೇಳಿಕೆ ಹಿನ್ನಲೆ ಶಾಂತಿಧಾಮ ಮುಂದೆ ಯುವತಿ ಹಾಗೂ ಪ್ರೇಮಿಯ ನಡುವೆ ಹೈಡ್ರಾಮವೇ ನಡೆದಿದೆ.

ಸಿನಿಮೀಯ ರೀತಿಯಲ್ಲಿ ಯುವತಿಯನ್ನ ಯುವಕ ಎಳೆದೊಯ್ಯಲು ಯತ್ನಿಸಿದ್ದರಿಂದ ಕೆಲಕಾಲ ಸಾಂತ್ವನ ಕೇಂದ್ರದ ಮುಂದೆ ಗೊಂದಲ ವಾತಾವರಣ ಉಂಟಾಗಿತ್ತು. ಜೊತೆಗೆ ಇಬ್ಬರೂ ಪೋಷಕರ ನಡುವೆ ಗಲಾಟೆ ಕೂಡ ನಡೆದಿದೆ. ಬಲವಂತವಾಗಿ ಅಮೃತಾಳನ್ನು ಪೋಷಕರು ಕಾರಿನಲ್ಲಿ ಕರೆದೊಯ್ಯುತ್ತಿದ್ದಂತೆ ಅಮೃತಾ ‘ಗಂಡ ಬೇಕು’ ಅಂತಾ ಕಿರುಚಾಡಿದ್ದಾಳೆ. ಈ ವೇಳೆ ಪ್ರೇಮಿ ಕಾರು ಅಡ್ಡಗಟ್ಟಿ ಪ್ರೇಯಸಿಗಾಗಿ ಪೋಷಕರ ಮುಂದೆ ಗೋಗರೆದಿದ್ದಾನೆ. ಇದೆಲ್ಲವೂ ಪೊಲೀಸರ ಮುಂದೆಯೇ ನಡೆದಿದೆ. ಶಿವಪ್ರಸಾದ್ ಹೆಂಡ್ತಿನೂ ಬೇಕು, ರಕ್ಷಣೆನೂ ಬೇಕು ಎಂದು ಇಡೀ ರಾತ್ರಿ ಸಾಂತ್ವನ ಕೇಂದ್ರ ಮುಂದೆ ಕುಳಿತು ಪಟ್ಟು ಹಿಡಿದಿದ್ದರಿಂದ ಅಮೃತಾ ಪೋಷಕರು ಆಕೆಯನ್ನು ಸಾಂತ್ವನ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಾರೆ. ಪ್ರೇಮಿಗಳಿಬ್ಬರು ಬೇರೆ ಬೇರೆ ಜಾತಿಯವರಾಗಿದ್ದರಿಂದ ಪೋಷಕರು ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.