ಕುಡಿದ ಅಮಲಿನಲ್ಲಿ ಸ್ನೇಹಿತನನ್ನೇ ಕೊಂದ!

88
firstsuddi

ಬೆಂಗಳೂರು : ಕುಡಿದ ಅಮಲಿನಲ್ಲಿ ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ನಗರದ ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಶಾಂತ್ ತನ್ನ ಸ್ನೇಹಿತ ನಿತೇಶ್ ನನ್ನು ಕೊಲೆ ಮಾಡಿದ್ದಾನೆ. ಸ್ನೇಹಿತರಾಗಿದ್ದ ನಿತೇಶ್ ಹಾಗೂ ಪ್ರಶಾಂತ್ ತಡರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ಕುಡಿದ ಅಮಲಿನಲ್ಲಿ ನಿತೇಶ್ ಕಾಲಿಗೆ ಒದ್ದಿದ್ದಾನೆ. ಬಳಿಕ ಇಬ್ಬರು ಒಟ್ಟಿಗೆ ಮಲಗಿದ್ದರು. ಮಲಗಿ ಸ್ವಲ್ಪ ಸಮಯದ ನಂತರ ಮತ್ತೆ ಎಚ್ಚರಗೊಂಡ ಪ್ರಶಾಂತ್, ನನಗೇ ಒದೆಯುತ್ತೀಯಾ ಎಂದು ಹಾಲೋ ಬ್ರಿಕ್ಸ್‌ ಅನ್ನು ನಿತೇಶ್ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಪ್ರಶಾಂತ್ ಸ್ಥಳದಿಂದ ಕಾಲ್ಕಿತ್ತಿದ್ದ ಎನ್ನಲಾಗಿತ್ತು.

ಸದ್ಯ ಪ್ರಶಾಂತ್ ನನ್ನು ಡಿ.ಜೆ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.