ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ. ಈ ಕುರಿತು ಕುವೆಂಪು ವಿವಿಯ ಒಂದು ಟೀಂ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಆ್ಯಂಟಿ ಇಸ್ರೇಲ್ ಪ್ಯಾಲೆಸ್ಟೈನ್ನ ಜಕಾರ್ತಾ ಮೂಲದಿಂದ ಹ್ಯಾಕ್ ಆಗಿದ್ದು, ಕಲಿಂಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಹ್ಯಾಕ್ ಮಾಡಿದೆ ಎಂದು ತಿಳಿದುಬಂದಿದೆ. ಸೇವ್ ಪ್ಯಾಲೆಸ್ಟೈನ್–ಇಸ್ರೇಲ್ ಡಾಗ್ ಎಂದು ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ಹ್ಯಾಕ್ ಆಗಿರುವುದರಿಂದ ವಿವಿಯ ಟೆಕ್ನಿಕಲ್ ಟೀಂ ವೆಬ್ ಸೈಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ತಾಂತ್ರಿಕ ತಂಡದಿಂದ ವೆಬ್ಸೈಟ್ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ.










