ಕೃಷ್ಣಾನದಿಯಲ್ಲಿ ದೇವರ ಪಲ್ಲಕ್ಕಿ ತೊಳೆಯಲು ತೆರಳಿದ್ದ ಇಬ್ಬರು ಸಹೋದರರು ನೀರುಪಾಲು…

42
firstsuddi

ವಿಜಯಪುರ: ಯುಗಾದಿ ಅಮಾವಾಸ್ಯೆಯಂದು ವಿಜಯಪುರ ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿಯ ಕೃಷ್ಣಾನದಿಯಲ್ಲಿ ದೇವರ ಪಲ್ಲಕ್ಕಿ ತೊಳೆಯಲು ಹಾಗೂ ಪುಣ್ಯಸ್ನಾನ ಮಾಡಲು ನದಿಗೆ ಇಳಿದಿದ್ದ ಸಹೋದರರಿಬ್ಬರು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ .

ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ನಿವಾಸಿಗಳಾದ ಯಶಸ್ವಿ ರಾಜು ಮಾದರ(13) ಮತ್ತು ಶ್ರೀಧರ ಶಿವಪ್ಪ ಮಾದರ ಅಲಿಯಾಸ್ ದೊಡ್ಡಮನಿ(10) ಮೃತರು.

ಯುಗಾದಿ ಪ್ರಯುಕ್ತ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಆಗಮಿಸಿ ಪಲ್ಲಕ್ಕಿ ತೊಳೆದು ಸ್ನಾನ ಮಾಡುವ ವಾಡಿಕೆ ಈ ಗ್ರಾಮದಲ್ಲಿದೆ. ಅದರಂತೆ ದೇವರ ಪಲ್ಲಕ್ಕಿಯೊಂದಿಗೆ ನೀರಿಗೆ ಇಳಿದಿದ್ದ ಸಹೋದರರು ನೀರುಪಾಲಾಗಿದ್ದಾರೆ. ಇಬ್ಬರು ಬಾಲಕರ ಶವಗಳನ್ನು ಪತ್ತೆ ಮಾಡಿದ ಪೊಲೀಸರು ಶವಗಳನ್ನು ಮೇಲೆ ತಂದಿದ್ದಾರೆ.

ಕಾನೂನು ಪ್ರಕಾರ ಮರಣೋತ್ತರ ಪರೀಕ್ಷೆ ನಡೆಸಿ ಬಾಲಕರ ಪೋಷಕರಿಗೆ ಶವಗಳನ್ನು ಹಸ್ತಾಂತರ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.