ಬೆಂಗಳೂರು : ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಮುಂಭಾಗ ನೀರು ನಿಂತು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಿಲ್ದಾಣದ ಅರೈವಲ್ ಹಾಗೂ ಡಿಪಾರ್ಚರ್ ಸ್ಥಳಕ್ಕೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಒಂದ್ಕಡೆ ಮಳೆಯಾದರೆ, ಮತ್ತೊಂದ್ಕಡೆ ಕ್ಯಾಬ್, ಆಟೋಗಳು ಸರಿಯಾದ ಸಮಯಕ್ಕೆ ಸಿಗದೆ ಪ್ರಯಾಣಿಕರು ಪರದಾಡಿದ್ರು.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಏರ್ಪೋರ್ಟ್ ಸಿಬ್ಬಂದಿ ಶ್ರಮಿಸಿದ ಫಲವಾಗಿ ಬೆಳಗ್ಗೆ ಏರ್ಪೋರ್ಟ್ ಸಹಜ ಸ್ಥಿತಿಗೆ ಮರಳಿತು. ಹೀಗಾಗಿ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.










