ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಮಾಯ…

60
firstsuddi

ಬೆಳಗಾವಿ : ಕೆಎಂಎಫ್‍ನ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯವಾಗಿದೆ. ಪ್ಯಾಕೆಟ್ ಮೇಲೆ ಹಿಂದಿ ಮತ್ತು ಇಂಗ್ಲಿಷ್ ಅಕ್ಷರಗಳಿದ್ದು, ಕೆಎಂಎಫ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಸರಬರಾಜು ಆಗುತ್ತಿರುವ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಬರಹ ಇಲ್ಲದಂತಾಗಿದೆ. ನಂದಿನಿ ಪ್ರೊಡೆಕ್ಟ್ ಕರ್ನಾಟಕದ್ದೋ, ಅಲ್ವೋ ಎಂದು ಪ್ರಶ್ನೆ ಮಾಡಿರುವ ಕನ್ನಡಿಗರು ಕೆಎಂಎಫ್ ವಿರುದ್ಧ  ಆಕ್ರೋಶ ಹೊರಹಾಕಿದ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಹಾಲಿನ ಪ್ಯಾಕೆಟ್ ಮುದ್ರಣವನ್ನು ತಕ್ಷಣ ನಿಲ್ಲಿಸಿ ಕನ್ನಡ ಭಾಷೆಯಲ್ಲಿ ಮುದ್ರಣ ಮಾಡುವಂತೆ ಆಗ್ರಹಿಸಿದ್ದಾರೆ.