ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಕಾರ್ಯಕ್ರಮವನ್ನು ಜುಲೈ.2ರಂದು ಆಯೋಜಿಸಲು ತೀರ್ಮಾನಿಸಲಾಗಿದ್ದು, ಕೆಪಿಸಿಸಿಯ ನೂತನ ಕಟ್ಟಡದಲ್ಲಿ ಜು.2ರಂದು ಬೆಳಿಗ್ಗೆ 10:30ಕ್ಕೆ ನೆರವೇರಲಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಗ್ಲೋಬಲ್ ಕಾಜೇಜು ಆವರಣದಲ್ಲಿ ಸಮಾರಂಭ ನಡೆಸಲು ವ್ಯವಸ್ಥೆ ಕೂಡಾ ಮಾಡಲಾಗಿದೆ. ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಏಕಕಾಲದಲ್ಲಿ ವೀಕ್ಷಿಸಲು 2800 ಸ್ಥಳಗಳಿಂದ ಲೈವ್ ಸ್ಕ್ರೀಮಿಂಗ್ ವ್ಯವಸ್ಥೆ ಮಾಡಲಾಗಿದೆ.










