ಕೆ.ಆರ್ ಮಾರ್ಕೆಟ್ ಫ್ಲೈ ಓವರ್​ನಿಂದ ಹಣದ ಮಳೆ ಸುರಿಸಿದ ವ್ಯಕ್ತಿ!

47
firstsuddi

ಬೆಂಗಳೂರು : ನಗರದ ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ನಿಂದ ಅಪರಿಚಿತ ವ್ಯಕ್ತಿಯೋರ್ವ ಹಣದ ಮಳೆಯನ್ನೇ ಸುರಿಸಿದ್ದಾನೆ.

ಆ್ಯಕ್ಟಿವ್ ಹೋಂಡಾದಲ್ಲಿ ಬಂದ ವ್ಯಕ್ತಿ ಫ್ಲೈಓವರ್ ಮೇಲಿಂದ ಹತ್ತು ರೂಪಾಯಿ ನೋಟು ಚೆಲ್ಲಿ ಹೋಗಿದ್ದಾರೆ. ಮೇಲಿಂದ ಹಣ ಬೀಳುತ್ತಿದ್ದಂತೆ ಕೆಲವರು ಅದನ್ನು ಎತ್ತಿಕೊಳ್ಳಲು ಮುಗಿಬಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನೋಟು ಎಸೆದ ವ್ಯಕ್ತಿ ಯಾರೆನ್ನುವುದರ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದು, ಯಾವ ಉದ್ದೇಶಕ್ಕೆ ಹಣ ಎಸೆದ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.