ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡಕ್ಕೆ ‘ಮಾತೃಭೂಮಿ ರಾಜ್ಯ ಪ್ರಶಸ್ತಿ’ ಗೌರವ.

21
ಕೊಟ್ಟಿಗೆಹಾರ : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬೀದಿ ನಾಟಕ, ಜಾನಪದ ನೃತ್ಯ ರಸ್ತೆ ಪ್ರದರ್ಶನ, ಕೋಲಾಟ, ಮಲೆನಾಡ ಸುಗ್ಗಿ, ಕಂಸಾಳೆ, ಸೋಬನೆ ಪದ, ರಾಗಿ ಬೀಸೋ ಪದ, ಜಾನಪದ ಗೀತೆ, ದೀಪದ ನೃತ್ಯ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ.
ತಂಡವು ಜಾನಪದ ಗೀತೆ ವಿಭಾಗದಲ್ಲಿ ಐದು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಾಧನೆ ಮಾಡಿದ್ದು, ಇದೀಗ ಪ್ರತಿಷ್ಠಿತ ‘ಮಾತೃಭೂಮಿ ರಾಜ್ಯ ಪ್ರಶಸ್ತಿ’ಗೆ ಆಯ್ಕೆಯಾದ ಸಂತೋಷ ತಂಡದ ಕಲಾವಿದರಲ್ಲಿ ವ್ಯಕ್ತವಾಗಿದೆ.
ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಜೆ.ಪಿ. ಕೂದುವಳ್ಳಿ ಅವರು ಅಭಿನಂದನೆ ಸಲ್ಲಿಸಿದ್ದು,
ತಂಡದ ಅಧ್ಯಕ್ಷ ಸುರೇಶ್ ಮಗ್ಗಲಮಕ್ಕಿ, ಖಜಾಂಚಿ ರವಿ ಹಂತೂರು, ಗೌರವಾಧ್ಯಕ್ಷ ಮಂಜುನಾಥ್ ಹೇಮಾವತಿ ನಗರ, ಕಾರ್ಯದರ್ಶಿ ರಂಜಿತ್ ಕೋಗಿಲೆ ಅವರು ಕಲಾವಿದರಿಗೆ ಶುಭ ಹಾರೈಸಿದ್ದಾರೆ.