ಕೊಟ್ಟಿಗೆಹಾರ : ಬಣಕಲ್ ಬಾಳೂರು ವಲಯ ಮಟ್ಟದ ಕ್ರೀಡಾಕೂಟವು ಉರ್ದು ಹಿರಿಯ ಪ್ರಾಥಮಿಕ ಶಾಲೆಯವರ ಆಯೋಜಕತ್ವದಲ್ಲಿ ಬಣಕಲ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಜರುಗಿತು.
ಈ ಕ್ರೀಡಾಕೂಟದಲ್ಲಿ ಬಣಕಲ್ ಪ್ರೌಢಶಾಲೆಯ 14 ವರ್ಷ ವಯೋಮಾನದ (Under–14) ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಕ್ರೀಡಾ ಪ್ರದರ್ಶನದ ಮೂಲಕ 108 ಅಂಕಗಳನ್ನು ಗಳಿಸಿ ಸಮಗ್ರ ಪ್ರಶಸ್ತಿಯನ್ನು ಕೀರ್ತಿಪೂರ್ಣವಾಗಿ ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ಬಣಕಲ್ ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್ ಹಾಗೂ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ವಿದ್ಯಾರ್ಥಿನಿ ಕೃತಿ ಪಡೆದು ಶಾಲೆಗೆ ಹೆಮ್ಮೆಯ ಸಾಧನೆ ತಂದುಕೊಟ್ಟಿದ್ದಾರೆ.
ಈ ಉಜ್ವಲ ಸಾಧನೆಯಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕ ಶ್ರೀನಿವಾಸ್, ಶಿಕ್ಷಕ ವೃಂದ ಮತ್ತು ಪೋಷಕರಿಂದ ಹೃತ್ಪೂರ್ವಕ ಅಭಿನಂದನೆಗಳು ವ್ಯಕ್ತವಾಯಿತು.
ಸಮಗ್ರ ಪ್ರಶಸ್ತಿಗೆ ಕಾರಣೀಭೂತರಾದ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್ ರವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ತಂಡದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರಾದ ಎ.ಎನ್. ಪ್ರತೀಕ್, ಶಿಕ್ಷಕಿಯರಾದ ವಲ್ಸಮ್ಮ, ದಿವ್ಯ ಜ್ಯೋತಿ, ಸುಪ್ರಿಯಾ ಹಾಗೂ ಸಹಕರಿಸಿದ ಶಿಕ್ಷಕರಾದ ಅಕ್ರಮ್ ಸೇರಿದಂತೆ ಎಲ್ಲಾ ಶಿಕ್ಷಕ ವೃಂದದ ಪರಿಶ್ರಮ ಈ ಸಾಧನೆಯಲ್ಲಿ ಮುಖ್ಯ ಪಾತ್ರ ವಹಿಸಿದೆ.
ಶಾಲಾ ಕುಟುಂಬವು ಈ ಜಯವನ್ನು ಹೆಮ್ಮೆಯಿಂದ ಸಂಭ್ರಮಿಸಿತು










