ಕೇರಳಿಗರ ಮೆಚ್ಚಿನ ಹಬ್ಬ ಓಣಂ…

343
firstsuddi

ಓಣಂ ಹಬ್ಬವನ್ನು ಕೇರಳ ರಾಜ್ಯದ ಜನತೆ ಒಗ್ಗೂಡಿ ಆಚರಿಸುತ್ತಾರೆ. ಕೇರಳದ ರಾಷ್ಟ್ರೀಯ ಹಬ್ಬವಾಗಿರುವ ಓಣಂ ದೇವರ ನಾಡೆಂದೆ ಪ್ರಸಿದ್ದಿಯಾಗಿರುವ ಕೇರಳದ ಮನೆ ಮನೆಯಲ್ಲೂ ಸಡಗರದಿಂದ ಆಚರಿಸುತ್ತಾರೆ. ಓಣಂ ವಿಶೇಷವಾಗಿ ಪೂಕ್ಕಳಂ, ಬೋಟ್ಸ್ ಸ್ಪರ್ದೆ, ಓಣಂ ಸದ್ಯಂ, ಓಣಂ ನೃತ್ಯ, ಹಲವು ರೀತಿಯ ಕಾರ್ಯಕ್ರಮಗಳು ಹತ್ತು ದಿನಗಳ ಕಾಲ ನಡೆಯುತ್ತವೆ. ಓಣಂ ದಿನದಂದು ಕೇರಳಿಗರಿಗೆ ಒಂದು ರೀತಿಯ ಸಂಭ್ರಮವಾಗಿದ್ದು, ಓಣಂ ಅನ್ನು ಬಲಿಚಕ್ರವರ್ತಿಯ ಆಗಮನದ ಸಂಕೇತ ಎಂಬಂತೆ ಕೊಂಡಾಡುತ್ತಾರೆ. ಈ ಹಬ್ಬ ಐತಿಹಾಸಿಕ ಮಹತ್ವವನ್ನು ಒಳಗೊಂಡಿದ್ದು, ಇತಿಹಾಸ ಕಥೆಗಳ ಪ್ರಕಾರ ರಾಜ ಬಲಿಚಕ್ರವರ್ತಿ ಆಳುತ್ತಿದ್ದನಂತೆ. ಬಲಿಚಕ್ರವರ್ತಿ ದಯಾಳು ಹಾಗೂ ಕರುಣಾಮಯಿ ಆಗಿದ್ದನು. ಆತನ ಆಡಳಿತದಲ್ಲಿ ಯಾರೂ ಕಷ್ಟಪಡುವುದನ್ನು ಸಹಿಸುತ್ತಿರಲಿಲ್ಲವಂತೆ. ರಾಜನ ಆಡಳಿತದಿಂದ ಜನರು ಸಂತೋಷದಿಂದ ಇದ್ದರು. ಕೇರಳ ರಾಜ್ಯದಲ್ಲಿ ಶಾಂತಿ ನೆಲೆಸಿತ್ತು. ರಾಜನ ಒಳ್ಳೆಯ ಮನಸ್ಸನ್ನು ಕಂಡ ರಾಜ ಬಲಿಚಕ್ರವರ್ತಿಯನ್ನು ಪೂಜಿಸುತ್ತಿದ್ದರಂತೆ. ಓಣಂ ದಿವಸ ಓಣಕಲಿಕಲ್ ಎನ್ನುವ ಆಟವನ್ನು ಗುಂಪು ಗುಂಪಾಗಿ ಆಡುವ ಸಂಪ್ರದಾಯ ಕೇರಳಿಗರಿಗೆ ಇದೆ. ಹೆಚ್ಚು ದೈಹಿಕ ಶ್ರಮವನ್ನು ಹಾಕಿ ಆಡಲಾಗುವ ಆಟವಾದ ತಳಂಪತ್ತುಕಲಿ ಹಾಗೂ ಕುಟುಕುಟು ಆಟವನ್ನು ಆಡುತ್ತಾರೆ. ಮಹಿಳೆಯರು ಹೆಚ್ಚಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.