ಕೊಟ್ಟಿಗೆಗೆ ಬೆಂಕಿ ತಗುಲಿ 100 ಕುರಿ, 200 ಕೋಳಿ, 6 ಹಸು ಸಜೀವದಹನ…

56
firstsuddi

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮದಲ್ಲಿ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ 200 ಕೋಳಿ, 100 ಕುರಿ ಹಾಗೂ 6 ಹಸುಗಳು ಸಜೀವದಹನವಾಗಿವೆ.

ರೈತ ಚೇತನ್ ಕುಮಾರ್ ಎಂಬುವರಿಗೆ ಸೇರಿದ ಹಸು, ಕುರಿ, ಕೋಳಿಗಳು ಮೃತಪಟ್ಟಿವೆ. ನಿನ್ನೆ ರಾತ್ರಿ 7:30ರ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ವ್ಯಾಪಿಸಿದ ಬೆಂಕಿಯಿಂದ ಸಾಕು ಪ್ರಾಣಿಗಳು ಸಾವಿಗೀಡಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸುಟ್ಟು ಕರಕಲಾದ ಹಸು, ಕುರಿ ಹಾಗೂ ಕೋಳಿಗಳ ಕಳೆಬರಹಗಳು ಮನಕಲುಕುವಂತಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಘಟನೆಯಲ್ಲಿ ಸುಮಾರು 30 ಲಕ್ಷ ರೂ.ಗಳಿಗೂ ಹೆಚ್ಚಿನ ನಷ್ಟ ಸಂಭವಿಸಿದೆ. ಘಟನೆ ನಡೆದು 12 ಗಂಟೆಗಳು ಕಳೆದರೂ ರೈತನ ನೆರವಿಗೆ ಬರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.