ಮೂಡಿಗೆರೆ: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಸಹಮತ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇದೇ ನವೆಂಬರ್ 30 ಹಾಗೂ ಡಿಸೆಂಬರ್ 1ರಂದುಎರಡು ದಿನಗಳ ಕಾಲ ಆಸಕ್ತರಿಗೆಪೋಟೋಗ್ರಫಿ ಶಿಬಿರ ಏರ್ಪಡಿಸಲಾಗಿದೆ ಎಂದು ಚಿಕ್ಕಮಗಳೂರಿನ ಸಹಮತ ಸಂಚಾಲಕ ಐವನ್ ಡಿಸಿಲ್ವ ತಿಳಿಸಿದ್ದಾರೆ.
ಈ ಶಿಬಿರದಲ್ಲಿ ನುರಿತ ತಜ್ಞರಿಂದ ಪೋಟೋಗ್ರಫಿಯ ಪ್ರಕಾರಗಳು,ಕ್ಯಾಮರಾ ಸೆನ್ಸರ್,ಫೋಕಸ್,ಎಕ್ಸ್ಫೊಸರ್,ಕ್ಯಾಮರಾ ಪರಿಕರಗಳು,ಆರ್ಟ್ಆಫ್ಎಡಿಟಿಂಗ್, ಹಾಗೂ ಪೋಟೋಗ್ರಫಿಗೆ ಸಂಬಂಧಿಸಿದ ಇತರೆ ವಿಷಯಗಳು ಸೇರಿದಂತೆ, ಪ್ರಾಯೋಗಿಕವಾಗಿ ಪೋಟೋಗ್ರಫಿಯ ವಿವಿಧ ಆಯಾಮಗಳ ಬಗ್ಗೆ ಆಸಕ್ತರಿಗೆ ತಿಳಿಸಿಕೊಡಲಾಗುತ್ತದೆ.
ಅದೇ ದಿನ ಸಂಜೆ 7 ಗಂಟೆಗೆ ದಾರವಾಡದ ಆಟಮಾಟ ತಂಡದ ವತಿಯಿಂದ ‘ಮತ್ತೊಬ್ಬ ಮಾಯೆ’ ಎಂಬ ಕಿರು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಪೋಟೋಗ್ರಫಿಯ ಬಗ್ಗೆ ಆಸಕ್ತಿಯುಳ್ಳವರು ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರವೇಶ ಶುಲ್ಕ ರೂ.500 ಆಗಿರುತ್ತದೆ. ಊಟದ ವ್ಯವಸ್ಥೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9448073330/9740602410 ಸಂಪರ್ಕಿಸಬಹುದಾಗಿದೆ.










