
ಕೊಟ್ಟಿಗೆಹಾರ ಗೆಳೆಯರ ಬಳಗ, ಮೂಡಿಗೆರೆ ಹಾಗೂ ಬಣಕಲ್ ಕಸಾಪ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷನಾಗಿ ಸಿಕ್ಕಿರುವ ಈ ಜವಾಬ್ದಾರಿಯನ್ನು ಸಮಾಜದ ಏಳಿಗೆ ಮಾಡುವ ನಿಟ್ಟಿನಲ್ಲಿ ಅಬಿವೃದ್ದಿ ಮಾಡಲು ವಿನಿಯೋಗಿಸುತ್ತೇನೆ. ಮೂಲಭೂತ ಸೌಕರ್ಯಗಳ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಹಣ, ಅಧಿಕಾರದ ಬಲಕ್ಕಿಂತ ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಯ ಗುಣವನ್ನು ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಜನಪ್ರತಿನಿಧಿ ಆದರ್ಶವಾಗಿ ಜವಾಬ್ದಾರಿ ನಿಭಾಯಿಸುವ ಅಗತ್ಯವಿದೆ ಎಂದರು.
ಗೆಳೆಯರ ಬಳಗದ ಅಧ್ಯಕ್ಷ ಅಭಿಲಾಷ್ ಮಾತನಾಡಿ ಗ್ರಾಮೀಣ ಭಾಗದಿಂದ ಬಂದ ಅನುಕುಮಾರ್ ಅವರ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದಲ್ಲಿಟ್ಟುಕೊಂಡು ಕೂಡ ರಾಜಕೀಯವಾಗಿ ಅಧ್ಯಕ್ಷ ಸ್ಥಾನ ಪಡೆದಿರುವುದು ಶ್ಲಾಘನೀಯ ಎಂದರು.
ವರ್ತಕರ ಸಂಘದ ಕಾರ್ಯದರ್ಶಿ ವೇಣುಗೋಪಾಲ್ ಪೈ, ಪ್ರವಾಸೋಧ್ಯಮ ಇಲಾಖೆ ಹೋಟೆಲ್ ಮಾಲೀಕ ಮರ್ಕಲ್ ಸತೀಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಕಸಾಪ ಬಣಕಲ್ ಹೋಬಳಿ ಅಧ್ಯಕ್ಷ ವಸಂತ್ ಹಾರ್ಗೋಡು, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂಜಯಗೌಡ ಕೊಟ್ಟಿಗೆಹಾರ, ಗೆಳೆಯರ ಬಳಗದ ಅಶ್ವತ್ ಅತ್ತಿಗೆರೆ, ದೀಕ್ಷಿತ್, ಸುನೀಲ್‍ಮಯೂರ್, ಯುವ ಮುಖಂಡರಾದ ಪಟ್ಟ ದೂರು ಕಾರ್ತಿಕ್, ಪ್ರದೀಪ್, ಸಂದೀಪ್, ಕಸಾಪದ ಭಕ್ತೇಶ್, ಪತ್ರಕರ್ತರಾದ ಸಂತೋಷ ಅತ್ತಿಗೆರೆ, ತನು ಕೊಟ್ಟಿಗೆಹಾರ, ನಂದೀಶ್ ಬಂಕೇನಹಳ್ಳಿ ಇದ್ದರು.