ಕೊಟ್ಟಿಗೆಹಾರ ಬಾಳೂರು ರಾಜ್ಯ ಹೆದ್ದಾರಿಯಲ್ಲಿ ರಸ್ತೆಯಲ್ಲಿ ಕಂದಕ- ಹೈರಾಣಾದ ಸವಾರರು…

150
firstsuddi

ಕೊಟ್ಟಿಗೆಹಾರ: ಬಾಳೂರಿನಿಂದ ಕೊಟ್ಟಿಗೆಹಾರಕ್ಕೆ ಬರುವ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ಬೃಹತ್ ಕಂದಕ ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪ್ರತಿ ವರ್ಷವೂ ಮಹಾಮನೆ ಎಸ್ಟೇಟ್ ಸಮೀಪದ ರಸ್ತೆಯಲ್ಲಿ ಬೃಹತ್ ಕಂದಕ ನಿರ್ಮಾಣವಾಗುತ್ತಿದ್ದು ಪ್ರತಿ ವರ್ಷವೂ ರಾತ್ರಿ ಸಮಯದಲ್ಲಿ ದ್ವಿಚಕ್ರ ಸವಾರರು ಸೇರಿದಂತೆ ಘನಾಹನ ಸವಾರರು ವಾಹನ ಚಲಾಯಿಸಲು ಈ ಕಂದಕ ಅಡ್ಡಿಯಾಗುತ್ತಿದ್ದು, ಅಪಾಯಕ್ಕೂ ಕಾರಣವಾಗುತ್ತಿದೆ. ಇದು ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವುದರಿಂದ ಈ ಜಾಗದಲ್ಲಿ ಹಿಂದೆ ಮೋರಿ ಅಥವಾ ಅಡಿಯಲ್ಲಿ ಜಲ ಕೀಳುವ ಸ್ಥಳವಾಗಿದ್ದು ಹೊಸ ಡಾಂಬರೀಕರಣ ಮಾಡುವಾಗ ಈ ಕಂದಕ ಹಾಗೆಯೇ ಮುಚ್ಚಿ ಹೋಗಿದ್ದು, ಮಳೆಗಾಲದ ಸಮಯವಾದ್ದರಿಂದ ಮತ್ತೆ ತೆರೆದುಕೊಂಡು ಅಪಾಯದ ತಾಣವಾಗುತ್ತಿದೆ.

ಈ ರಸ್ತೆಯ ಆಸುಪಾಸಿನ ರಸ್ತೆ ಬದಿಯಲ್ಲಿ ಗಿಡಗಂಟಿ ಬೆಳೆದಿದ್ದು ಮುಂದೆ ಬರುವ ವಾಹನಗಳಿಗೆ ರಸ್ತೆಯು ಕಾಣದೇ ಅಪಾಯದ ಸ್ಥಿತಿಯು ಇದೆ. ವಾಹನಗಳು ವೇಗವಾಗಿ ಬಂದಾಗ ಸೈಡ್ ಕೊಡಲು ಹೋಗಿ ಕಂದಕಕ್ಕೆ ಬಿದ್ದು ಅವಘಡ ಸಂಭವಿಸುವ ಮೊದಲು ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿಗಳು ರಾಜ್ಯ ಹೆದ್ದಾರಿಯ ಕೊಟ್ಟಿಗೆಹಾರ ಬಾಳೂರು ನಡುವಿನ ರಸ್ತೆಯ ಕಂದಕ ಮುಚ್ಚಬೇಕೆಂದು ಆಗ್ರಹಿಸಿದ್ದಾರೆ.