ಮಂಗಳೂರು/ಕೊಡಗು : ದಕ್ಷಿಣ ಕನ್ನಡ ,ಕೊಡಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆಗಳಲ್ಲಿ ಇಂದು ಬೆಳಗ್ಗೆ 9.12ರ ವೇಳೆಗೆ 3-4 ಸೆಕೆಂಡ್ ಶಬ್ದದೊಂದಿಗೆ ಲಘು ಕಂಪನವಾಗಿದೆ. ಸುಳ್ಯದ ಸಂಪಾಜೆ ಕಡೆಗಳಲ್ಲಿ ಕಪಾಟಿನಲ್ಲಿದ್ದ ಪಾತ್ರೆಗಳು ಕೆಳಕ್ಕೆ ಬಿದ್ದಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.
ಕೊಡಗು ಜಿಲ್ಲೆಯ ಸಂಪಾಜೆ ಗಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 9ರ ಸುಮಾರಿಗೆ 4 ರಿಂದ 5 ಸೆಕೆಂಡ್ ಗಳ ಕಾಲ ಭೂಮಿ ನಡುಗಿದೆ. ಕೆಲ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಶಬ್ದ ಬರುತ್ತಿದಂತೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.










