ಚೀನಾದಲ್ಲಿ ‘ಮಂಕಿ ಬಿ ವೈರಸ್ ಪತ್ತೆ’- ಸೋಂಕಿಗೆ ಮೊದಲ ವ್ಯಕ್ತಿ ಬಲಿ…

90
firstsuddi

ಬೀಜಿಂಗ್ : ಕೊರೊನಾ ಆರ್ಭಟದ ಬೆನ್ನಲ್ಲೇ ಇದೀಗ ಚೀನಾದಲ್ಲಿ ಮಂಕಿ ಬಿ ವೈರಸ್ ಪತ್ತೆಯಾಗಿದ್ದು, ಈ ಸೋಕಿಗೆ ಪಶುವೈದ್ಯರೊಬ್ಬರು ಬಲಿಯಾಗಿದ್ದಾರೆ.

ಮಾರ್ಚ್ ಆರಂಭದಲ್ಲಿ ಮೃತಪಟ್ಟ ಎರಡು ಕೋತಿಗಳನ್ನು ಅಧ್ಯಯನ ನಡೆಸಿದ ಬೀಜಿಂಗ್ ಮೂಲದ ಪಶುವೈದ್ಯ ಈ ಮಂಕಿ ಬಿ ವೈರಸ್ ಸೋಂಕಿಗೆ ಬಲಿಯಾಗಿದ್ದಾನೆ ಎಂದು ಚೀನಾದ ಸಿಡಿಸಿ ವೀಕ್ಲಿ ವರದಿ ಮಾಡಿದೆ.

53 ವರ್ಷದ ಪಶುವೈದ್ಯನಿಗೆ ಆರಂಭದಲ್ಲಿ ವಾಂತಿ ಬಂದಿತ್ತು. ನಂತರ ಜ್ವರ, ನರ ವೈಜ್ಞಾನಿಕ ರೋಗದ ಲಕ್ಷಣಗಳು ಬಂತು. ಇದರಿಂದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಕಿ ಬಿ ವೈರಸ್ ಸೋಂಕು ತಗುಲಿರುವುದು ದೃಢವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಅವರು ಮೇ 27ರಂದು ಬಲಿಯಾದರು ಎಂದು ವರದಿಯಾಗಿದೆ.

1992ರಲ್ಲಿ ವರ್ಷಗಳ ಹಿಂದೆ ಮಂಕಿ ಬಿ ವೈರಸ್ ಕಾಣಿಸಿಕೊಂಡಿತ್ತು. ಆದರೆ ಚೀನಾದಲ್ಲಿ ಇದೇ ಮೊದಲ ಬಾರಿಗೆ ಈ ಸೋಂಕು ಕಾಣಿಸಿಕೊಂಡಿದೆ.