ಕೊರೊನಾ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿದರೆ ಲಾಕ್ ಡೌನ್ ನಿಯಮ ಜಾರಿ : ಮುಂಬೈ ಮೇಯರ್.

67
firstsuddi

ಮುಂಬೈ : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಇಂದು ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ ಮಹಾನಗರ ಪಾಲಿಕೆ ಮೇಯರ್ ಕಿಶೋರಿ ಪೆಡ್ನೇಕರ್ ಅವರು, ಮುಂಬೈನಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಿದರೆ ಲಾಕ್ ಡೌನ್ ಹೇರಿಕೆ ಮಾಡಬೇಕಾಗುತ್ತದೆ. ಲಾಕ್ ಡೌನ್ ಯಾರೂ ಇಷ್ಟಪಡುವುದಿಲ್ಲ. ಆದರೆ, ಸೋಂಕಿತ ಪ್ರಕರಣ ಹೆಚ್ಚಾದರೆ ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮುಂಬೈನಲ್ಲಿ ನಿನ್ನೆ 8000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಕೊರೊನಾ ಜೊತೆಗೆ ಓಮಿಕ್ರಾನ್ ಕೂಡಾ ಹೆಚ್ಚು ಕಂಡು ಬರುತ್ತಿದ್ದು ಮಹಾರಾಷ್ಟ್ರದಲ್ಲಿ ಈವರೆಗೂ 500 ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಜನರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಕೆ ಹಾಗು ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಮೇಯರ್ ಮನವಿ ಮಾಡಿದ್ದಾರೆ.

ಮುಂಬೈನಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಈಗಾಗಲೇ 1 ರಿಂದ 9 ಮತ್ತು 11 ನೇ ತರಗತಿಗಳ ಎಲ್ಲಾ ಮಾಧ್ಯಮಗಳ ಶಾಲೆಗಳನ್ನು ಜನವರಿ 31 ರವರೆಗೆ ಮುಚ್ಚಲು ಪಾಲಿಕೆ ನಿರ್ಧರಿಸಿದೆ.