ಕೊರೊನಾ ಸೋಂಕಿನ ನಡುವೆ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ-7 ಮಂದಿ ಸಾವು 60 ಮಂದಿಗೆ ಸೋಂಕು…

173
firstsuddi

ಬೀಜಿಂಗ್ : ಚೀನಾದಿಂದ ಆರಂಭವಾದ ಕೊರೊನಾ ವೈರಸ್ ಈಗಾಗಲೇ ವಿಶ್ವದಾಧ್ಯಂತ ವ್ಯಾಪಿಸಿ ಲಕ್ಷ ಲಕ್ಷ ಜನರನ್ನು ಬಲಿಪಡೆದುಕೊಂಡಿದೆ. ಅಲ್ಲದೇ ಇನ್ನೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈ ನಡುವೆ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದ್ದು, ಈಗಾಗಲೇ 7 ಮಂದಿಯನ್ನು ಬಲಿಪಡೆದುಕೊಂಡಿದೆ. ಈ ಕುರಿತು ಚೀನಾದ ಸುದ್ದಿವಾಹಿನಿಯೊಂದು ವರದಿ ಮಾಡಿದ್ದು, ಜಿಯಾಂಗ್ಸು ಹಾಗೂ ಅನ್ಹುಯಿ ಪ್ರಾಂತ್ಯಗಳಲ್ಲಿ 60 ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. ಈ ವೈರಸ್‍ನ್ನು ಸೀವಿಯರ್ ಫೀವರ್ ವಿಥ್ ಥ್ರೋಂಬೊ ಬೊಕ್ಯಾಟೋಪಿನಿಯಾ ಸಿಂಡ್ರೋಮ್ ಬುನಿವೈರಸ್ ಎಂದು ಕರೆಯಲಾಗಿದ್ದು, ಈ ವೈರಸ್ ಕೀಟಗಳ ಕಡಿತದಿಂದ ಮನುಷ್ಯರಿಗೆ ಹರಡುವ ಸಾಧ್ಯತೆಯಿದೆ ಎಂದು ಎಂದು ತಿಳಿಸಿದೆ.