ಡಾ. ಎಂ.ಎಸ್. ಮಣಿ
ಭಾಗ-1
ಮನುಷ್ಯ ಪ್ರತಿಬಾರಿ ಸೋಂಕು ಎದುರಿಸಿದಾಗ ಹಿಂದೆ ಏನಾಗಿತ್ತು ಎಂಬುದನ್ನು ಮರೆಯುವನು. ಕೆಲವೊಮ್ಮೆ ಮತ್ತೊಮ್ಮೆ ಕಂಡುಹಿಡಿಯಲು ಪ್ರಯತ್ನಿಸುವನು. ಅಲ್ಲದೆ ಹಿಂದೆ ಅನುಸರಿಸಿದ ವಿಧಾನಗಳನ್ನೆ ಅನುಸರಿಸಲು ಮುಂದಾಗುವನು. ಇರಲಿ, ಇತಿಹಾಸವನ್ನು ಕೆದಕಿ ನೋಡಿದಾಗ ಜಗತ್ತುಹಲವು ಬಗೆಯ ಸೋಂಕುಗಳನ್ನು ಕಂಡಿದೆ. ಅಂತಹವುಗಳಲ್ಲಿ `ಪ್ಲೇಗ್’ ಎಂಬುದೇ ಅತ್ಯಂತ ಭಾದೆಗೊಳಪಡಿಸಿದ ಸೋಂಕಾಗಿತ್ತು. ಇದು 14ನೇ ಶತಮಾನದಲ್ಲಿ ಸುಮಾರು 75ರಿಂದ 200 ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿತ್ತು.
ಇದರಂತೆಯೇ ಪ್ರಾಣ ತೆಗೆದ ಸೋಂಕು 1918ರಲ್ಲಿ ಕಾಣಿಸಿಕೊಂಡಿತ್ತು. ಅದು `ಸ್ಪ್ಯಾನಿಷ್ ಫ್ಲೂ’ ಆಗಿತ್ತು. ಇದು ವಿಶ್ವದಾದ್ಯಂತ 50 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. ನಂತರ 2009ರಲ್ಲಿ ಕಾಣಿಸಿಕೊಂಡ `ಏಡ್ಸ್’ ಮತ್ತು `ಎಚ್1ಎನ್1’ 3 ಕೋಟಿ ಜನರ ಜೀವ ತೆಗೆದುಹಾಕಿತ್ತು. ಇನ್ನೀಗ ಕಾಡುತ್ತಿರುವ `ಕೊರೋನಾ ಸೋಂಕು’ 4.89 ಮಿಲಿಯನ್‍ಗಿಂತ ಹೆಚ್ಚು ಜನರನ್ನು ಕಾಡುತ್ತಿದೆ. 3 ಲಕ್ಷಕ್ಕೂ ಅಧಿಕ ಜನರ ಪ್ರಾಣವನ್ನು ಹೀರಿದೆ. `ಕೊರೋನಾ’ಗೆ ಚಿಕಿತ್ಸೆ ಇಲ್ಲದಿರುವುದರಿಂದ ಎಲ್ಲೆಡೆ ಜನ ಭಯಭೀತರಾಗಿದ್ದಾರೆ.
ಹಲವು ಸಾಂಕ್ರಾಮಿಕ ರೋಗಗಳು ಪ್ರಮುಖ ವಿದ್ಯಮಾನವನ್ನು ಮಣ್ಣಿನಿಂದ ಉದ್ಭವವಾಗುವ ಮೂಲಕ ತಿಳಿಸುತ್ತದೆ. ಇಂತಹ ಹಲವು ಸೋಂಕು ಸಮಾಜದ ಮೇಲೆ ಅಪ್ಪಳಿಸಿದಾಗ ಹಿಂದಿನ ಅನುಭವವನ್ನು ಮರೆತಿರುತ್ತೇವೆ. ಹಿಂದೆ ಸೋಂಕು ಕಾಡಿದಾಗ ಅನುಸರಿಸಿದ ವಿಧಾನಗಳ ಅರಿವನ್ನು ಹೊಂದಿರುವುದಿಲ್ಲ.
1896ರ ಆಗಸ್ಟ್‍ನಲ್ಲಿ ಹಡಗಿನ ಮೂಲಕ ಮುಂಬೈ ಪ್ರವೇಶಿಸಿದ ಪ್ಲೇಗ್ 1897ರಲ್ಲಿ ಹುಬ್ಬಳ್ಳಿ ಪ್ರವೇಶಿಸಿ, 1898ರಲ್ಲಿ ಬೆಂಗಳೂರಿಗೆ ಬಂತು. ಸ್ವಾತಂತ್ರ್ಯಪೂರ್ವದಿಂದ ಇಲ್ಲಿನವರೆಗೆ ಕಾಣಿಸಿಕೊಂಡ ಸಾಂಕ್ರಾಮಿಕ ರೋಗಗಳೆಲ್ಲವೂ ಆಮದಾದವು. ಅಂದರೆ ಹೊರ ದೇಶಗಳಿಂದ ಬಂದವಾಗಿವೆ. ಈಗಿನ ಕೊರೋನಾದಂತೆ ಪ್ಲೇಗ್ ಕೂಡ 1860ರಲ್ಲಿ ಚೀನಾದಿಂದ ಹೊರಬಂದಿತ್ತು. ನಂತರ 1894ರಲ್ಲಿ ಹಾಂಕಾಂಗ್‍ಗೂ ಹರಡಿತ್ತು. ಇವು ನಮ್ಮಲ್ಲಿನ ಆರೋಗ್ಯಕರವಲ್ಲದ ಪರಿಸರದಿಂದ ಹರಡಿ ಜನರ ಜೀವವನ್ನು ಹೈರಾಣಾಗಿಸಿವೆ. ಹಿಂದೆ ರಾಜ-ಮಹಾರಾಜರು, ಧರ್ಮಗುರುಗಳು ಮೂಢನಂಬಿಕೆಯನ್ನು ಭಿತ್ತಿ, ಸೋಂಕಿನ ಹೆಸರಲ್ಲಿ ದೇವರುಗಳನ್ನು ಮಾಡಿ ಪೆÇೀಷಿಸಿದ್ದರು. 1919ರಲ್ಲಿ ಪ್ಲೇಗ್ ಮತ್ತು ಕಾಲರಾದಿಂದ ಕಾಪಾಡಲು ಕೆ.ಆರ್. ಪೇಟೆಯ ಮುತ್ತುರಾಯಸ್ವಾಮಿ ದೇಗುಲಕ್ಕೂ ಮೊರೆ ಇಟ್ಟಿದ್ದರು. ಹಲವೆಡೆ `ಪ್ಲೇಗಮ್ಮ’ ದೇಗುಲಗಳು ತಲೆ ಎತ್ತಿದವು. ಇದು ಇಂದಿಗೂ ಇವೆ. ಈಗಿನ `ಕೊರೋನಾ ಸೋಂಕು’ ಅಯೋಧ್ಯೆಯಲ್ಲಿ ರಾಮ ದೇಗುಲಕ್ಕೆ ಅಡಿಪಾಯ ಹಾಕಿದರೆ ತಗ್ಗುತ್ತದೆ ಎಂದು ಶಿವಸೇನೆಯ ಮುಖವಾಣಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಅಡಿಪಾಯ ಹಾಕಿದ 24 ಘಂಟೆಯಲ್ಲಿ 56,282 ಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. 904 ಜನರ ಪ್ರಾಣ ಹಾರಿ ಹೋಗಿತ್ತು. `ಕೊರೋನಾ ಪಿಡುಗಿಗೆ’ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ. ಕೊನೆಯದಾಗಿ ರಾಜ್ಯವನ್ನು ದೇವರೇ ಕಾಪಾಡಬೇಕೆಂದು ಆರೋಗ್ಯ ಸಚಿವ ಶ್ರೀರಾಮುಲು ಅವರೇ ಹೇಳಿಕೆ ನೀಡಿದ್ದರು. ಇದರ ನಡುವೆ ಬೆಳಗಾವಿ ನಗರದ ಬುದ್ಧ, ಬಸವ, ಅಂಬೇಡ್ಕರ್ ರುದ್ರಭೂಮಿಯಲ್ಲಿ ಹೊಸದಾಗಿ ಕೊಂಡಿದ್ದ ಫಾರ್ಚೂನರ್ ಕಾರಿಗೆ ಚಾಲನೆ ನೀಡಿ ಮೌಢ್ಯಾಚರಣೆ ವಿರುದ್ಧ ಕಾಂಗ್ರೆಸ್ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಜಾಗ್ರತಿ ಮೂಡಿಸಿದ್ದಾರೆ. ಆದರೂ ಅಂದಿನಿಂದ ಇಂದಿನ ವರೆಗೂ ಮೂಢನಂಬಿಕೆಯನ್ನು ಬಿತ್ತುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಹಿಂದೆ `ಪ್ಲೇಗ್’ನಂತಹ ಮಾರಣಾಂತಿಕ ರೋಗ ಹರಡಬಾರದೆಂದು ಜನರೇ ಊರು ಬಿಟ್ಟು ಅರಣ್ಯಗಳ ಬುಡಗಳಲ್ಲಿ, ಬೆಟ್ಟಗಳ ಬುಡದಲ್ಲಿ ಹೋಗಿ ನೆಲೆಸಿದ್ದರು. ಇನ್ನೂ ಹಲವರು ಖಾಲಿಬಿದ್ದ ಬಂಜರು ಭೂಮಿಗಳಿಗೆ ತೆರಳಿ ವಾಸ್ತವ್ಯ ಹೂಡಿದ್ದರು. ಹಲವೆಡೆ ಊರ ಪ್ರವೇಶ ದ್ವಾರಗಳಲ್ಲಿ ಹೊರಗಿನ ಜನರನ್ನು ಒಳಬಿಡದಂತಿರಲು ಜನರೇ ಹಗಲಿರುಳು ಕಾವಲಿದ್ದರು. ಇಂದಿಗೂ ಇದೇ ಸ್ಥಿತಿ ಇದೆ.
ಅದು ಸ್ವಾತಂತ್ರ್ಯಪೂರ್ವದ ಕಾಲ. ಗಂಡ ಹೆಂಡತಿಯಂತೆ ಇಬ್ಬರು ಎತ್ತಿನ ಗಾಡಿಯಲ್ಲಿ ಊರಿನ ಜನರ ಮುಂದೆಯೇ ಪ್ರವೇಶ ದ್ವಾರ ದಾಟಿ ಮುಂದೆ ಹೋಗುತ್ತಿದ್ದರು. ಅಲ್ಲಿ ಕಾವಲಿಗಿದ್ದವರಿಗೆ ಕಿಂಚಿತ್ತು ಇವರ ಬಗ್ಗೆ ಅನುಮಾನ ಬಂದಿರಲಿಲ್ಲ. ಅವರಿಬ್ಬರು ತೀವ್ರ ಜ್ವರದಿಂದ ಬಳಲುತ್ತಿದ್ದು, ಹಳೆ ಮದ್ರಾಸ್ ರಸ್ತೆಯಲ್ಲಿದ್ದ ಐಸೋಲೇಷನ್ ಆಸ್ಪತ್ರೆಯ ಮುಂದೆ ಬಂದು ನಿಂತಿದ್ದರು. ಇವರಿಬ್ಬರ ಕಂಕುಳಲ್ಲಿ ಗಡ್ಡೆ ಎದ್ದಿತ್ತು. ಇವರಿಬ್ಬರ ನರಳಾಟ, ಸಂಕಟ ಕಂಡು ಆಸ್ಪತ್ರೆಯ ಒಳಗಡೆ ಸೇರಿಸಿಕೊಂಡು, ಪ್ರತ್ಯೇಕಿಸಿ, ಪ್ರತ್ಯೇಕ ಶಿಬಿರಗಳಲ್ಲಿಟ್ಟರು. ಇಷ್ಟಕ್ಕೂ ಇವರಿಬ್ಬರೂ ದನಗಾಹಿಗಳಾಗಿದ್ದು, ಬ್ರಿಟೀಷರ ಸೈನ್ಯದಲ್ಲಿದ್ದ ಅಧಿಕಾರಿಯೊಬ್ಬರ ಮನೆಗೆ ಹಾಲು ಹಾಕುತ್ತಿದ್ದರು. ಸಣ್ಣ, ಸಣ್ಣ ಪ್ರತ್ಯೇಕ ಕೋಣೆಗಳಲ್ಲಿದ್ದ ಇವರಿಬ್ಬರಿಗೂ ಅದೇ ಅಂತಃಸ್ಥಾನವೂ ಆಗಿತ್ತು. ಹಾಲು ಮಾರಾಟಗಾರರಾಗಿದ್ದ ಈ ದಂಪತಿಗಳು ಹಲವರನ್ನು ಭೇಟಿಯಾಗಿದ್ದರು.
ಇವರಿಬ್ಬರನ್ನು ಕಲ್ಪಲ್ಲಿಯಲ್ಲಿ ಆಳವಾದ ಗುಂಡಿ ತೋಡಿ ಹೂತು ಹಾಕಲಾಗಿದೆ. ಹೂತು ಹಾಕುವಾಗ ಸುಣ್ಣದ ಕಲ್ಲುಗಳನ್ನು ಹಾಕಿ ಮುಚ್ಚಲಾಗಿದೆ. ಇವರಿಬ್ಬರು ಬದುಕಿದ್ದಾಗ ಬಳಸುತ್ತಿದ್ದ ಸಾಮಾನುಗಳನ್ನೂ ಭಸ್ಮಗೊಳಿಸಲಾಗಿದೆ. ಇವರು ಬಳಕೆಗೆಂದು ಇಟ್ಟುಕೊಂಡಿದ್ದ ಧವಸ-ಧಾನ್ಯಗಳನ್ನು ಬೆಂಕಿಗೆ ಆಹುತಿ ಕೊಡಲಾಗಿದೆ. ಇವರಿಂದ ಹಾಲು ಹಾಕಿಸಿಕೊಂಡಿದ್ದ ಹಲವರನ್ನು ಪತ್ತೆಮಾಡಿ ಇಂದಿನಂತೆ ಪ್ರತ್ಯೇಕವಾಗಿ ಇಡಲಾಗಿತ್ತು.
ಸಾಂಕ್ರಾಮಿಕ ರೋಗಗಳು ಮೂಲಸ್ವರೂಪದಲ್ಲಿ ಒಡಕುಂಟು ಮಾಡುತ್ತವೆ. ಸೋಂಕು ಬಂದ ವ್ಯಕ್ತಿ ನೆರೆಮನೆಯ ವ್ಯಕ್ತಿಯಾಗಿದ್ದು, ಅವರಿಗೆ ನೆರವಿನ ಹಸ್ತ ಚಾಚಿದರೆ ನಿಮಗೂ ಸಹ ಸೋಂಕು ಬಡಿಯುವ ಸಾಧ್ಯತೆ ಹೆಚ್ಚೇ ಇರುತ್ತದೆ. ಕೆಲವೊಮ್ಮೆ ದೈನಂದಿನ ಕಾರ್ಯಗಳನ್ನು ಕೈಗೊಳ್ಳುವಾಗಲೂ ಸೋಂಕು ಹರಡಿಬಿಡುವ ಸಂಭವಗಳಿರುತ್ತವೆ. ಆಗ ಅಧಿಕಾರಸ್ಥರು `ಕ್ವಾರಂಟೈನ್’ ವಿಧಿಸಿಬಿಡುವರು. ಹಿಂದಿನಿಂದಲೂ ಸೋಂಕು ಹಬ್ಬುವುದಕ್ಕೆ ಹೊರಗಿನವರನ್ನು ದೂಷಿಸುವುದು ಅಭ್ಯಾಸವಾಗಿಬಿಟ್ಟಿದೆ. `ಭಯ’ ಮತ್ತು `ಭೀತಿ’ ಸಾಂಕ್ರಾಮಿಕ ರೋಗದ ಗುಣಲಕ್ಷಣ ಕೂಡ ಆಗಿದೆ. ಜೊತೆಗೆ ಸೋಂಕಿನ ಕುರಿತಂತೆ ಊಹಾಪೆÇೀಹಗಳ ಕಂತೆಯಿಂದ `ಭಯ’ ಮತ್ತು `ಭೀತಿ’ ಇನ್ನಷ್ಟು ಅಧಿಕವಾಗುತ್ತದೆ. ಇದು `ಕೊರೋನಾ’ ವಿಚಾರದಲ್ಲೂ ಆಗಿಬಿಟ್ಟಿದೆ.
ಹಿಂದೆ ಅಡುಗೆ ಮಾಡುವವನೊಬ್ಬನನ್ನು ಕಳ್ಳತನದ ಪ್ರಕರಣದಲ್ಲಿ ಕರೆತಂದು ಪೆÇಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ನಡೆಸಿದ್ದ ನಾಲ್ವರು ಪೆÇಲೀಸರಲ್ಲಿ ಒಬ್ಬ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಅಸುನೀಗಿದ್ದನು. ನಿಗೂಢವಾಗಿ ಅಸುನೀಗಿದ ಪೆÇಲೀಸ್ ಪೇದೆಯ ದೇಹವನ್ನು ಪೆÇೀಸ್ಟ್‍ಮಾರ್ಟಂ ಮಾಡಲಾಗಿತ್ತು. ವರದಿಯಲ್ಲಿ ಆತನ ಯಾವುದೇ ಗ್ರಂಥಿಗಳು ಹಿಗ್ಗಿರಲಿಲ್ಲ. ಆದರೆ, `ನ್ಯೂಮೋನಿಕ್ ಪ್ಲೇಗ್’ಗೆ ಒಳಗಾಗಿದ್ದನು. ಇದಕ್ಕೆ ಕಾರಣ ಈತ ಪೆÇೀಸ್ಟ್‍ಮಾರ್ಟಂ ಮಾಡುವ ಸಹಾಯಕರೊಂದಿಗೆ ಕೈಜೋಡಿಸಿದ್ದ. ಪ್ರಾಣಬಿಟ್ಟಿದ್ದ ಅಡುಗೆಯವನ ಕೈಯಲ್ಲಿದ್ದ ಉಂಗುರ ಬಿಚ್ಚಿಕೊಳ್ಳಲು ಕೈಬೆರಳು ಕಚ್ಚಿ ಎಳೆದುಕೊಂಡಿದ್ದ. ಹೀಗಾಗಿಯೇ ಇವನು ಕೂಡ ಸೋಂಕಿಗೆ ಒಳಗಾಗಿದ್ದನು. ಪೆÇೀಸ್ಟ್‍ಮಾರ್ಟಂ ಮಾಡುತ್ತಿದ್ದ ಸಹಾಯಕ ಕೂಡ ಕಣ್ಮರೆಯಾಗಿದ್ದನು. ನಂತರದ ದಿನಗಳಲ್ಲಿ ಪೆÇಲೀಸ್ ಪೇದೆಯ ಕುಟುಂಬದ ಸದಸ್ಯರುಗಳೆಲ್ಲರೂ ಪ್ಲೇಗ್ ಸೋಂಕಿಗೆ ತುತ್ತಾಗಿ ಪ್ರಾಣ ಬಿಟ್ಟಿದ್ದರು.
ಇಂತಹದ್ದೇ ಘಟನೆ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲೂ ಇತ್ತೀಚೆಗೆ ನಡೆದಿದೆ. ಇಲ್ಲಿನ ತೇಗೂರು ಗ್ರಾಮದ ಪ್ರೇಮಕುಮಾರಿ ಕೊರೋನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 11ರ ರಾತ್ರಿ ಮೃತಪಟ್ಟಿದ್ದರು. ಅವರ ಕತ್ತಿನಲ್ಲಿದ್ದ 50 ಗ್ರಾಂ ತೂಕದ ಮಾಂಗಲ್ಯಸರ ನಾಪತ್ತೆಯಾಗಿತ್ತು. ಸಿಬ್ಬಂದಿಯ ತನಿಖೆ ನಡೆಸಿದ್ದರೂ ಮಾಂಗಲ್ಯಸರ ಪತ್ತೆಯಾಗಿರಲಿಲ್ಲ. `ಮೃತಪಟ್ಟ ಕೊರೋನಾ ಸೋಂಕಿತೆಯ ಮಾಂಗಲ್ಯಸರ ಕಳ್ಳತನ’ ಎಂದು ಸುದ್ದಿಯಾಗಿದ್ದೆ, ನಾಪತ್ತೆಯಾಗಿದ್ದ ಮಾಂಗಲ್ಯಸರ ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾಗಿದೆ.
ಇಂತಹ ಘಟನೆಗಳಿಂದ ಎಚ್ಚೆತ್ತ ಜನರು ಯಾರ್ಯಾರ ಮನೆಯಲ್ಲಿ ಪ್ಲೇಗ್ ಸೋಂಕು ಇತ್ತೋ ಅಂತಹ ಕುಟುಂಬದವರನ್ನು ಹುಡುಕಿ, ಹುಡುಕಿ ಜೀವಂತವಾಗಿ ದಹಿಸಿಬಿಟ್ಟರು. ಹಲವೆಡೆ ಊರು ಬಿಟ್ಟು ಓಡಿಸಿಬಿಟ್ಟರು. ಇನ್ನೂ ಹಲವೆಡೆ ರಾಸಾಯನಿಕಗಳನ್ನು ಸಿಂಪಡಿಸಿ, ಕಿಟಕಿ-ಬಾಗಿಲುಗಳನ್ನು ಮುಚ್ಚಿ ಸೋಂಕಿತರನ್ನು ಹೊರಬರದಂತೆ ತಡೆದಿದ್ದರು. ಸೋಂಕಿತರು ಹೊರಬರದಂತೆ ನಿಗಾವಹಿಸುವುದಕ್ಕಾಗಿ ಕಾವಲುಗಾರರನ್ನು ಕೂಡ ನಿಯೋಜಿಸಲಾಗಿತ್ತು.
ಓರ್ವ ಧನಿಕನೊಬ್ಬನಿಗೆ ಸೋಂಕು ಕಾಣಿಸಿಕೊಂಡಿತ್ತು. ಮೊದಲಿಗೆ ಈತ, ನಂತರ ಇವನ ನಾಲ್ವರು ಮಕ್ಕಳು, ಮಡದಿ ಎಲ್ಲರೂ ಮರಣಿಸಿದ್ದರು. ಇವರಿಗೆ ಸುತ್ತಮುತ್ತಲಿನ ಊರುಗಳಲ್ಲಿ ನೆಂಟರಿಷ್ಟರ ದಂಡು ಇದ್ದಿದ್ದರಿಂದ ಅವರಲ್ಲಿ ಹಲವರು ಸೋಂಕಿಗೆ ಒಳಗಾಗಿ ಗತಿಸಿದರು. ಸೋಂಕಿನಿಂದ ಪಾರು ಮಾಡಲು ಸಾಧ್ಯವೇ ಇಲ್ಲವೆಂದ ಕಡೆ ಅಂದಿನ ಆಡಳಿತ ಸೋಂಕಿತರ ಮನೆಗಳನ್ನು ನಾಶಪಡಿಸಿತ್ತು. ಇವರುಗಳ ದೇಹ ಸಾಗಿಸಲು ಕೂಲಿ ಮಾಡುವ ಜನರನ್ನು ಗುರ್ತಿಸಿ ಅವರುಗಳಿಗೆ `ಹ್ಯಾಫ್ಕೈನ್’ನ ರೋಗನಿರೋಧಕ ಚುಚ್ಚುಮದ್ದುಗಳನ್ನು ನೀಡಿ ಬಳಸಿಕೊಳ್ಳಲಾಗುತ್ತಿತ್ತು. ಇವರು ಕೂಡ ಬಹುದಿನ ಉಳಿಯಲಿಲ್ಲ. ಇದ್ದಕ್ಕಿದ್ದಂತೆ ಜೀವ ಬಿಡುತ್ತಿದ್ದರು. ಹಲವು ಸೋಂಕಿತರು ಯಾರ ಕಣ್ಣಿಗೂ ಬೀಳದೆ ವೇಶ ಮರೆಸಿಕಂಡು ಸಿಕ್ಕ-ಸಿಕ್ಕ ಕಡೆ ಓಡಿ ಹೋಗಿದ್ದರು. ಇದೊಂದು ರೀತಿಯ ವಿಭಜನೆಯೇ ಆಗಿತ್ತು.
-ಮುಂದುವರೆಯುತ್ತದೆ.










