ತೆಲಂಗಾಣ : ಕೊಳವೆ ಬಾವಿಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಮೇದಕ್ ಜಿಲ್ಲೆಯ ಪಾಪಣ್ಣಪೇಟೆ ಮಂಡಲದ ಪೊಡಚನಪಲ್ಲಿ ಗ್ರಾಮದಲ್ಲಿ ನಡೆದಿದೆ. ಸಂಜಯ್ ಸಾಯಿವರ್ಧನ್(3) ಮೃತ ಮಗು ಎಂದು ಗುರುತಿಸಲಾಗಿದ್ದು, ಮಗುವಿನ ಪೋಷಕರು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿದ್ದು, ಬಳಿಕ ಕೂಡಲೇ ಎನ್‍ಡಿಆರ್‍ಎಫ್ ಸಿಬ್ಬಂಧಿ ಹಾಗೂ ಪೊಲೀಸರು ಭೇಟಿ ನೀಡಿ ಸತತ 11 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಆಕ್ಸಿಜನ್ ಕೊರತೆಯಿಂದಾಗಿ ಮಗು ಮೃತಪಟ್ಟಿದ್ದು, ಮೃತದೇಹವನ್ನು ಹೊರತೆಗೆಯಲಾಗಿದ್ದು, ಬೋರ್‍ವೆಲ್ ಕೊರೆಸಿ ಅದನ್ನು ಮುಚ್ಚದೆ ಇದ್ದ ಕೊಳವೆ ಬಾವಿ ಮಾಲೀಕನಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಮೇದಕ್ ಜಿಲ್ಲಾಧಿಕಾರಿ ಧರ್ಮರೆಡ್ಡಿ ಅವರು ತಿಳಿಸಿದ್ದಾರೆ.










