ಪುಲ್ವಾಮದಲ್ಲಿ ಮತ್ತೊಮ್ಮೆ ನಡೆಯಬೇಕಿದ್ದ ಉಗ್ರ ದಾಳಿಯನ್ನು ವಿಫಲಗೊಳಿಸಿದ ಭಾರತೀಯ ಯೋಧರು…

246
firstsuddi

ಶ್ರೀನಗರ : ಜಮ್ಮು ಕಾಶ್ಮೀರಾದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಮತ್ತೊಮ್ಮೆ ಭಾರಿ ದಾಳಿ ನಡೆಸಲು ರೂಪಿಸಿದ ಸಂಚನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದು, ಇದರಿಂದ ನಡೆಯಬೇಕಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಉಗ್ರರು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆಯಿಂದ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯ ಪವೃತ್ತರಾದ ಯೋಧರು ಇಂದು ಬೆಳಿಗ್ಗೆ ಚೆಕ್ ಪಾಯಿಂಟ್‍ಗಳಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಕಲಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರು ಬರೋಬ್ಬರಿ 20 ಕೆಜಿಗೂ ಅಧಿಕ ಸ್ಪೋಟಕಗಳನ್ನು ತುಂಬಿಕೊಂಡು ಚೆಕ್ ಪಾಯಿಂಟ್‍ನಲ್ಲಿ ಚಲಿಸುತ್ತಿತ್ತು. ಬಳಿಕ ಯೋಧರು ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಕಾರನ್ನು ನಿಲ್ಲಿಸದೆ ಮತ್ತಷ್ಟು ವೇಗವಾಗಿ ಕಾರನ್ನು ಚಲಾಯಿಸಿದ್ದು, ಈ ವೇಳೆ ಯೋಧರು ಗುಂಡನ್ನು ಹಾರಿಸಿದ್ದಾರೆ. ಆಗ ಚಾಲಕ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದು, ಈಗಾ ಕಾರಿನಲ್ಲಿದ್ದ ಐಇಡಿ ಸ್ಪೋಟಕಗಳನ್ನು ಹೊರತೆಗೆದು ಬಾಂಬ್ ನಿಷ್ಕ್ರಿಯ ದಳ ಅದನ್ನು ನಿಷ್ಕ್ರಯಗೊಳಿಸಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.