ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರ ವಶಕ್ಕೆ!

121
firstsuddi

ಬೆಳಗಾವಿ : ನಗರದ ಖಾಸಗಿ ಹೋಟೆಲ್ ನಲ್ಲಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಸುವರ್ಣಸೌಧದ ಬಳಿ ಸುವರ್ಣ ಗಾರ್ಡನ್ ನಲ್ಲಿ  ಇಂದು ರೈತ ಮುಖಂಡರು, ಸಾರಿಗೆ ನೌಕರರ ಜೊತೆ ಸಭೆ ನಡೆಸಲು ಕೋಡಿಹಳ್ಳಿಯವರು ನಿರ್ಧರಿಸಿದ್ದರು. ಆದರೆ ಸಭೆ ನಡೆಸುವ ಮುನ್ನವೇ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಹಿರೇಬಾಗೇವಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಇನ್ನೂ ವಶಕ್ಕೆ ಪಡೆದಿರುವ ಸಂಬಂಧ ಪ್ರತಿಕ್ರಿಯಿಸಿರುವ ಕೋಡಿ ಹಳ್ಳಿ ಚಂದ್ರಶೇಖರ್ ಅವರು ನನ್ನನ್ನು ವಶಕ್ಕೆ ಪಡೆದಿರುವುದು ತಪ್ಪು. ಸರ್ಕಾರ ತಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.