ಕೋವಿಡ್ ಕೇಸ್ ಹೆಚ್ಚಳ – ಬೆಂಗಳೂರಿಗೆ ಪ್ರತ್ಯೇಕ ಗೈಡ್ ಲೈನ್…

47
firstsuddi

ಬೆಂಗಳೂರು : ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಆರೋಗ್ಯ ಇಲಾಖೆ ಬೆಂಗಳೂರಿಗೆ ಪ್ರತ್ಯೇಕ ಗೈಡ್ ಲೈನ್ ಹೊರಡಿಸಿದೆ. ಕಚೇರಿಗಳು, ಶಾಲಾ- ಕಾಲೇಜು ಹಾಗೂ ಅಪಾರ್ಟ್ಮೆಂಟ್ ಗಳಿಗೆ ಗೈಡ್ ಲೈನ್ ನೀಡಿ ಸುತ್ತೋಲೆ ಹೊರಡಿಸಲಾಗಿದೆ.

1.ಅಪಾರ್ಟ್ ಮೆಂಟ್ ಗಳಲ್ಲಿ ಕೊರೊನಾ ಪಾಸಿಟಿವ್ ಆದ ಬ್ಲಾಕ್ ಗಳನ್ನು ಕ್ಲಸ್ಟರ್ ಎಂದು ಪರಿಗಣಿಸಬೇಕು.

2.ಸೋಂಕಿನ ಲಕ್ಷಣ ಹೊಂದಿದವರಿಗೆ ರ್‍ಯಾಪಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕು.

3.ಪಾಸಿಟಿವ್ ಬಂದ ವ್ಯಕ್ತಿಯನ್ನ ಹೋಂ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಬೇಕು.

4.ಪಾಸಿಟಿವ್ ಇದ್ದವರ ಸಿ.ಟಿ ವ್ಯಾಲ್ಯೂ 25 ಕ್ಕಿಂತ ಹೆಚ್ಚಿದ್ದರೆ ಜಿನೋಮ್ ಸೀಕ್ವೆನ್ಸಿಂಗ್ ಗೆ ಒಳಪಡಿಸಬೇಕು .ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು

5. 60 ವರ್ಷ ಮೇಲ್ಪಟ್ಟವರು ಹಾಗೂ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆರ್ ಟಿಸಿಪಿಆರ್ ಪರೀಕ್ಷೆಗೆ ಒಳಪಡಿಸುವುದು.

6. ಸೋಂಕು ಪತ್ತೆಯಾದಲ್ಲಿ ಅಪಾರ್ಟ್ಮೆಂಟ್, ಕಾಂಪ್ಲೆಕ್ಸ್, ಟವರ್, ಬ್ಲಾಕ್ ಗಳನ್ನು ಸೀಲ್ ಡೌನ್ ಮಾಡುವ ಅಗತ್ಯವಿಲ್ಲ. ಬದಲಿಗೆ ಕೋವಿಡ್ ಕೊನೆಯ ಪ್ರಕರಣ ಗುಣಮುಖ ಹೊಂದುವವರೆಗೂ ಸಾಮಾನ್ಯ ಸೌಲಭ್ಯಗಳಾದ ಕ್ಲಬ್ ಹೌಸ್, ಈಜುಕೊಳ, ಕ್ರೀಡಾಕೊಠಡಿ, ಸಂಘದ ಕಚೇರಿ ಇತ್ಯಾದಿಗಳನ್ನು ಮುಚ್ಚಬೇಕು.

7. ಮನೆ ಆರೈಕೆಯಲ್ಲಿರುವ ಸೋಂಕಿತರ ಮನೆಯಲ್ಲಿ ಕೆಲಸ ಮಾಡುವವರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ರೋಗ ಲಕ್ಷಣಗಳಿಂದ ಮುಕ್ತರಾಗಿರಬೇಕು. ಎನ್. 95 ಮಾಸ್ಕ್ ಧರಿಸಬೇಕು. ಎರಡು ಡೋಸ್ ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು.

ಕಚೇರಿಗಳು ಹಾಗೂ ಶಾಲಾ-ಕಾಲೇಜಿಗೆ ರೂಲ್ಸ್:

1.ಕೋವಿಡ್-19ನ ಲಕ್ಷಣಗಳನ್ನು ಹೊಂದಿರುವವರು ಕಚೇರಿಗಳು ಮತ್ತು ಕಾಲೇಜುಗಳಿಗೆ ಹಾಜರಾಗದಂತೆ ಸೂಚಿಸುವುದು.

2. ಸೋಂಕು ಲಕ್ಷಣ ಹೊಂದಿರುವವರನ್ನು ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟಲ್ಲಿ ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್, ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಬೇಕು.

3. ಕೋವಿಡ್ 19 ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸುವುದು.

4. ಕ್ಲಸ್ಟರ್ ಮತ್ತು ಸಾಂಕ್ರಾಮಿಕ ರೋಗಗಳು ವರದಿಯಾದಲ್ಲಿ ರೋಗ ಲಕ್ಷಣ ಇರುವವರಿಗೆ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಬೇಕು. ಪಾಸಿಟಿವ್ ಆದರೆ ವ್ಯಕ್ತಿಯ ಲಕ್ಷಣಗಳನ್ನು ಆಧರಿಸಿ ಐಸೋಲೇಟ್ ಮಾಡಬೇಕು. ಅಲ್ಲದೆ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಸೂಚಿಸಬೇಕು.

5. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರವನ್ನು ಕಾಯುಕೊಳ್ಳಬೇಕು

ಶಾಲೆಗಳು- ಕಾಲೇಜಿಗೆ ನಿಯಮ ( 12 ನೇ ತರಗತಿಯವರೆಗೆ):

1.ಕೋವಿಡ್ 19 ಲಕ್ಷಣಗಳನ್ನು ಹೊಂದಿರುವವರು ಶಾಲೆಗೆ ಹಾಜರಾಗದಂತೆ ಸೂಚಿಸುವುದು.

2.ಸದರಿಯವರು ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡುವುದು ಹಾಗೂ ಪಾಸಿಟಿವ್ ಫಲಿತಾಂಶ ಬಂದಲ್ಲಿ, ಐಸೋಲೆಷನ್ ನಲ್ಲಿ ಇರಿಸಿ ನಿರ್ವಹಣೆ ಮಾಡುವುದು.

3. ಶಾಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾದ ಕೊಠಡಿಗಳನ್ನು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು ಮತ್ತು ಮರುದಿನದಿಂದ ಕೊಠಡಿಗಳನ್ನು ಪುನಃ ಬಳಕೆ ಮಾಡಬಹುದು

4. ಕಡ್ಡಾಯ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಪಾಲನೆ

5.ಹ್ಯಾಂಡ್ ಸ್ಯಾನಿಟೈಸರ್ ಗಳ ಬಳಕೆಗೆ ಅವಕಾಶ, ಪ್ರವೇಶ ದ್ವಾರದಲ್ಲಿ ಜ್ವರ ತಪಾಸಣೆಗೆ ಥರ್ಮಲ್ ಗಳ ಬಳಕೆ

6.ಜ್ವರ, ನೆಗಡಿ, ಕೆಮ್ಮ ಹಾಗೂ ಉಸಿರಾಟದ ತೊಂದರೆ ಗಳಿರುವವರನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆ
ಪಡೆಯಲು ಶಿಫಾರಸು ಮಾಡುವುದು.