ಕೋವಿಡ್ ಲಸಿಕೆ ‘ಕಾರ್ಬೆವಾಕ್ಸ್’ ತುರ್ತು ಬಳಕೆಗೆ ಅನುಮತಿ…

64
firstsuddi

ನವದೆಹಲಿ : ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) 12 ರಿಂದ 18 ವರ್ಷ ವಯಸ್ಸಿನವರಿಗೆ ಬಯೋಲಾಜಿಕಲ್ ಇ ಕೋವಿಡ್ ಲಸಿಕೆಯಾಗಿರುವ ಕಾರ್ಬೆವಾಕ್ಸ್ ತುರ್ತು ಬಳಕೆಗೆ ನಿನ್ನೆ ಅನುಮತಿ ನೀಡಿದೆ.

ಇದು ಕೋವಿಡ್-19 ವಿರುದ್ಧ ಭಾರತದಲ್ಲಿ ಮೊದಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆರ್ ಬಿಡಿ ಪ್ರೋಟೀನ್ ಉಪ-ಘಟಕದ ಕೊವಿಡ್ ಲಸಿಕೆಯಾಗಿದೆ. ಹೈದರಾಬಾದ್ ನ ಬಯಾಲಾಜಿಕಲ್ ಇ ಕಂಪನಿಯ ಕಾರ್ಬೆವಾಕ್ಸ್ ಈಗಾಗಲೇ ಭಾರತದಲ್ಲಿ ಲಭ್ಯವಿರುವ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ ಲಸಿಕೆಗಳಿಗಿಂತಲೂ ಅತ್ಯಂತ ಕಡಿಮೆ ದರದ ಕೊವಿಡ್ ಲಸಿಕೆಯಾಗಿದೆ ಎಂದು ತಿಳಿದುಬಂದಿದೆ.