ಖಾದ್ಯ ತೈಲ ಬೆಲೆಯಲ್ಲಿ ಭಾರೀ ಇಳಿಕೆ…

67
firstsuddi

ನವದೆಹಲಿ : ದೇಶದ ಪ್ರಮುಖ ಖಾದ್ಯ ತೈಲ ಉತ್ಪಾದನಾ ಕಂಪನಿಯಾಗಿರುವ ಅದಾನಿ ಒಡೆತನದ `ಅದಾನಿ ವಿಲ್ಮರ್’ ಕಂಪನಿಯು ಫಾರ್ಚೂನ್ ಖಾದ್ಯತೈಲ ಬೆಲೆಯನ್ನು ಪ್ರತಿ ಲೀಟರ್ ಗೆ 30 ರೂ. ವರೆಗೆ ಇಳಿಕೆ ಮಾಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಬೆಲೆ ಇಳಿಕೆ ಮತ್ತು ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇ.5ರಷ್ಟು ಇಳಿಸಿದ ಪರಿಣಾಮ ಫಾರ್ಚೂನ್ ವಿವಿಧ ಮಾದರಿಯ ಖಾದ್ಯ ತೈಲ ಬೆಲೆಯನ್ನು ಲೀ.ಗೆ 5 ರೂ. ನಿಂದ 30 ರೂ. ವರೆಗೂ ಇಳಿಸಿದೆ.

ಫಾರ್ಚೂನ್ ಸೋಯಾಬೀನ್ ಎಣ್ಣೆ ಲೀ.ಗೆ 195 ರೂ. ನಿಂದ 165 ರೂ. ಸೂರ್ಯಕಾಂತಿ ಎಣ್ಣೆ 210 ರೂ. ನಿಂದ 199 ರೂ.ಗೆ, ಸಾಸಿವೆ ಎಣ್ಣೆ 195 ರೂ. ನಿಂದ 190 ರೂ.ಗೆ, ಶೇಂಗಾ ಎಣ್ಣೆ 220 ರೂ. ನಿಂದ 210 ರೂ.ಗೆ ಇಳಿಕೆ ಆಗಲಿದೆ.