ಖ್ಯಾತ ಬಂಡಾಯ ಸಾಹಿತಿ ಮತ್ತು ಕನ್ನಡ ಸಾರಸತ್ವ ಲೋಕದ ಬರಹಗಾರ ಡಾ.ಚೆನ್ನಣ್ಣ ವಾಲೀಕಾರ ನಿಧನ…

216
firstsuddi

ಕಲಬುರಗಿ : ಖ್ಯಾತ ಬಂಡಾಯ ಸಾಹಿತಿ ಮತ್ತು ಕನ್ನಡ ಸಾರಸತ್ವ ಲೋಕದ ಬರಹಗಾರ ಡಾ.ಚೆನ್ನಣ್ಣ ವಾಲೀಕಾರ(78) ಅನಾರೋಗ್ಯದಿಂದ ನಿಧನರಾಗಿದ್ದು, ಕಳೆದ 9ತಿಂಗಳಿನಿಂದ ಕಾಮಾಲೆ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರಿಗೆ ಕೃತ ಉಸಿರಾಟದ ವ್ಯವಸ್ಥೆಯನ್ನು ನೀಡಿ ಮನೆಗೆ ಕಳುಹಿಸಲಾಗಿತ್ತು. ಆದರೆ ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ಮನೆಯಲ್ಲೇ ವಾಲೀಕಾರ ಅವರು ಕೊನೆಯುಸಿರೆಳೆದಿದ್ದಾರೆ. ವಾಲೀಕಾರ ಅವರು ಪತ್ನಿ ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಇಂದು ಬೆಳಿಗ್ಗೆ 11 ರಿಂದ 12ಗಂಟೆ ವರೆಗೆ ಕಲಬುರಗಿಯ ಹಿಂದಿ ಪ್ರಚಾರ ಸಭೆ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಮೃತರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 3ಗಂಟೆಗೆ ಅವರ ಸ್ವಗ್ರಾಮ ಚಿತ್ತಾಪುರ ತಾಲ್ಲೂಕಿನ ಶಂಕರವಾಡಿ ಗ್ರಾಮದಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.