ಆನೇಕಲ್ : ಮಾಡೆಲಿಂಗ್ ಗೆ ಸಹಾಯ ಮಾಡುವ ಆಮಿಷವೊಡ್ಡಿ ಯುವತಿಯ ಮೇಲೆ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಗನ್ ತೋರಿಸಿ ಅತ್ಯಾಚಾರವೆಸಗಿದ್ದಾನೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವರ್ದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷ ಅತ್ಯಾಚಾರವೆಸಗಿದ ಆರೋಪಿ. ಈತ ಮಾಡೆಲಿಂಗ್ ಗೆ ಸಹಾಯ ಮಾಡುವುದಾಗಿ ಆಮಿಷವೊಡ್ಡಿ ಫೇಸ್ ಬುಕ್ ಮೂಲಕ ಯುವತಿಗೆ ಪರಿಚಿತನಾಗಿದ್ದ. ಬಳಿಕ ನಿನಗೆ ಕೆಲಸ ಕೊಡಿಸುತ್ತೇನೆ. ನನ್ನ ಮನೆಗೆ ಬಾ ಎಂದು ತನ್ನ ಮನೆಗೆ ಯುವತಿಯನ್ನು ಕರೆಸಿಕೊಂಡಿದ್ದ. ಮನೆಗೆ ಬಂದ ಯುವತಿ ಮೇಲೆ ಅಹಮದ್ ಪಾಷಾ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಇದಕ್ಕೆ ವಿರೋಧಿಸಿದ ಯುವತಿಗೆ ಗನ್ ತೋರಿಸಿ ಬೆದರಿಸಿದ್ದಾನೆ.
ಇದೀಗ ಆರೋಪಿಯ ವಿರುದ್ದ ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ತಲೆಮರೆಸಿಕೊಂಡಿರುವ ಅಹಮದ್ ಪಾಷಾ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.










