ಗೃಹ ಶೋಭೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ…

112

ಮೂಡಿಗೆರೆ: ಪಟ್ಟಣದ ಚರ್ಚ್ ಹಾಲಿನಲ್ಲಿ  ಒಂದು ವಾರಗಳ ಕಾಲ ನಡೆಯುವ ಅಂತರಾಷ್ಟ್ರೀಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಗೃಹಶೋಭೆಯನ್ನು ಕಾಫಿ ನಾಡು ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷರಾದ ಕಲಾವತಿ ರಾಜಣ್ಣ. ಹಾಗೂ ಜೀ ಟಿವಿ ಹಿಂದಿ ಡ್ಯಾನ್ಸ್ ಖ್ಯಾತಿಯ ಸೌಮ್ಯಶ್ರೀ ಉದ್ಘಾಟಿಸಿದರು.

ಮಾತನಾಡಿದ ಇವರು ಮೂಡಿಗೆರೆಯಲ್ಲಿ ಗೃಹ ಶೋಭೆ ತಂಡ ಹಲವು ವರ್ಷಗಳಿಂದ ವಸ್ತು ಪ್ರದರ್ಶನ ಹಾಗೂ ಮಾರಾಟ ಆಯೋಜಿಸಿದ್ದು, ಸಾರ್ವಜನಿಕರಿಗೆ ಕೈಗೆಟಕುವ ರೀತಿಯಲ್ಲಿ ಲಭ್ಯವಾಗುತ್ತಿದೆ. ಯಾವುದೋ ಮಲ್ಟಿಪ್ಲೆಕ್ಸ್ ಗೆ ಹೋದ ಅನುಭವವಾಗುತ್ತದೆ ಎಂದರು.

ಗೃಹ ಶೋಭೆ ಆಯೋಜಕರಾದ ರಾಘವೇಂದ್ರ ಕೆಸವಳಲು ಮಾತನಾಡಿ ಗೃಹ ಶೋಭೆಯಲ್ಲಿ ಎಲ್ಲಾ ವಿಧದ ವಸ್ತುಗಳು ದೊರೆಯಲಿದ್ದು ಸಾರ್ವಜನಿಕರು ಇದನ್ನು ಸದುಪಯೋಗ ಪಡೆಸಿಕೊಳ್ಳುವಂತೆ  ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಗೃಹ ಶೋಭೆ ವ್ಯವಸ್ಥಾಪಕರುಗಳಾದ ಕೃಷ್ಣ ,ನವೀನ್ ಮಂಡ್ಯ, ಮಧು, ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘದ ಸದಸ್ಯರಾದ ಬೀನ ರಾಘವೇಂದ್ರ, ಪ್ರೇಮ ದೇವವೃಂದ ಸೌಂದರ್ಯ, ಕರ್ನಾಟಕ ಧ್ವನಿ ಸಂಘದ ಅಧ್ಯಕ್ಷ ಸಂದೀಪ್ ದಾರದಹಳ್ಳಿ , ಬೆಟಗೆರೆ ಅಶ್ವಥ್ ಗೌಡ, ಪುನೀತ್ ಕಡಿದಾಳ್, ಶೌರ್ಯ ಪಟೇಲ್ ಉಪಸ್ಥಿತರಿದ್ದರು.