ಗ್ಯಾಂಗ್ ರೇಪ್ ಪ್ರಕರಣ : ಜೇಬಿನಲ್ಲಿ ಸದಾ ಕಾಂಡೋಮ್ ಇಟ್ಟುಕೊಂಡೇ ತಿರುಗಾಡುತ್ತಿದ್ದ ಓರ್ವ ಆರೋಪಿ!

103
firstsuddi

ಮೈಸೂರು : ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾದ ಐವರು ಆರೋಪಿಗಳಲ್ಲಿ ಓರ್ವ ಆರೋಪಿ ಜೇಬಿನಲ್ಲಿ ಸದಾ ಕಾಂಡೋಮ್ ಇಟ್ಟುಕೊಂಡೇ ತಿರುಗಾಡುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

ಗ್ಯಾಂಗ್ ನ ಉಳಿದ ಸದಸ್ಯರು ಹಣಕ್ಕೆ ಬೇಡಿಕೆ ಇಟ್ಟರೆ ಈ ಕಾಮುಕನಿಗೆ ಸೆಕ್ಸ್ ಮುಖ್ಯವಾಗಿತ್ತು. ಮೂವರು ಯುವತಿಯರು ಕೈ ಕೊಟ್ಟ ಮೇಲೆ ವಿಕೃತನಾಗಿದ್ದ ಈ ಆರೋಪಿ ಸದಾ ಕಾಂಡೋಮ್ ಇಟ್ಟುಕೊಂಡು ಅವಕಾಶ ಸಿಕ್ಕಗಾಲೆಲ್ಲಾ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗುತ್ತಿದೆ. ಮೈಸೂರಿನ ಸಾಮೂಹಿಕ ಅತ್ಯಾಚಾರ ನಡೆದ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಬಿಯರ್ ಬಾಟಲ್ ಗಳು ಹಾಗೂ ಬಳಸಿ ಬಿಸಾಡಿದ ಕಾಂಡೋಮ್ ಸಿಕ್ಕಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.

ತಮಿಳುನಾಡು ಮೂಲದ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಾಮೂಹಿಕ ಅತ್ಯಾಚಾರ ಹಾಗೂ ದರೋಡೆ ಪ್ರಕರಣದಲ್ಲಿ ಏಳು ಜನ ಭಾಗಿಯಾಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಹುಡಕಾಟ ಮುಂದುವರೆಸಿದ್ದಾರೆ.