ಗ್ಯಾಂಗ್ ರೇಪ್ ಪ್ರಕರಣ ; ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು…

85
firstsuddi

ಬೆಂಗಳೂರು : ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬಾಂಗ್ಲಾದೇಶ ಮೂಲದ ನಿವಾಸಿ ಶೋಬುಜ್ ಗುಂಡೇಟು ತಿಂದು ಬಂಧಿಯಾಗಿರುವ ಆರೋಪಿ. ಈತ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಯುವತಿಯ ಗುಪ್ತಾಂಗಕ್ಕೆ ಕಾಲಲ್ಲಿ ಒದ್ದು, ವಿಕೃತಿ ಮೆರೆದಿದ್ದು ಈತನೇ ಎನ್ನಲಾಗಿದೆ.

ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶೋಬುಜ್ ಶ್ರೀರಾಂಪುರ ಬಳಿಯ ಪೇಪರ್ ಆಯುವವರ ಶೆಡ್ ನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ಜೀಪಿನಲ್ಲಿ ಕರೆ ತರುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಮೂತ್ರ ವಿಸರ್ಜನೆ ಮಾಡಬೇಕೆಂದು ಎಂದು ಕಥೆ ಕಟ್ಟಿದ್ದಾನೆ. ಒಂದು ವೇಳೆ ನಿಲ್ಲಿಸದಿದ್ದರೆ ಕಾರಿನಲ್ಲೇ ಮೂತ್ರ ವಿಸರ್ಜನೆ ಮಾಡುತ್ತೇನೆಂದು ಹಠ ಹಿಡಿದಿದ್ದಾನೆ. ಪೊಲೀಸರು ಕೆಳಗಿಳಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಿಡಿಯಲು ಹೋದ ಹೆಡ್ ಕಾನ್ಸ್ಟೇಬಲ್ ದೇವೆಂದರ್ ನಾಯಕ್ ಹಾಗೂ ಸಬ್ ಇನ್ಸ್ಪೆಕ್ಟರ್ ಮೇಲೆ ಬಟನ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆರೋಪಿ ಪರಾರಿಯಾಗಲು ಯತ್ನಿಸಿದಾಗ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಒಟ್ಟು 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮೇ 27 ರಂದು 6 ಜನ ಆರೋಪಿಗಳಾದ ರಿದಯ್ ಬಾಬು, ರಕಿಬುಲ್ ಇಸ್ಲಾಂ ಸಾಗರ್, ಮೊಹಮ್ಮದ್ ಬಾಬು ಶೇಕ್, ಅಕಿಲ್, ಇಬ್ಬರು ಮಹಿಳಾ ಆರೋಪಿಗಳಾದ ಕಾಜಲ್, ನಸ್ರತ್ ಎಂಬುವರನ್ನು ಬಂಧಿಸಲಾಗಿತ್ತು. ನಿನ್ನೆ ರಫ್ಸನ್, ಆತನ ಪತ್ನಿ ತಾನ್ಯಾ ಮತ್ತು ದಾಲೀಮ್ ಎಂಬುವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.