ಗ್ರಾ.ಪಂ ಉಪಾಧ್ಯಕ್ಷನ ಕೊಲೆ – ಹಣದ ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ…

147
firstsuddi

ತುಮಕೂರು : ಗ್ರಾಮ ಪಂಚಾಯತಿ ಉಪಾಧ್ಯಕ್ಷನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆಯಲ್ಲಿ ನಡೆದಿದೆ.

ಹಂದನಕೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಶೋಕ್ (46) ಕೊಲೆಯಾದ ವ್ಯಕ್ತಿ. ನಿನ್ನೆ ಮಧ್ಯರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅಶೋಕ್ ಮತ್ತು ಸೋಮಶೇಖರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಟಾಟಾ ಏಸ್ ವಾಹನವನ್ನು ಹತ್ತಿಸಲಾಗಿದೆ. ಪರಿಣಾಮ ಅಶೋಕ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಸೋಮಶೇಖರ್ ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಅಶೋಕ್ ನಾಗರಾಜ್ ನಾಯ್ಕ್ ಎಂಬವರ ಬಳಿ ಸಾಲ ಪಡೆದಿದ್ದರು ಎಂದು ತಿಳಿದುಬಂದಿದ್ದು, ಸಾಲದ ಹಣ ವಾಪಸ್ ಕೊಡದ ವಿಚಾರಕ್ಕೆ ಈ ಕೃತ್ಯವನ್ನು ನಾಗರಾಜ್ ನಾಯ್ಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.