ಕಾರವಾರ : ಮೀನು ಹಿಡಿಯಲು ತೆರಳಿದ್ದ ಬೋಟ್ ಗೆ ಬೆಂಕಿ ತಗುಲಿದ್ದು, ಬೋಟ್ ನಲ್ಲಿದ್ದ ಏಳು ಮಂದಿ ಮೀನುಗಾರರರನ್ನು ರಕ್ಷಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆ ಮೂಲದ ವರದ ವಿನಾಯಕ ಎಂಬ ಬೋಟ್ ಮೀನುಗಾರಿಕೆ ನಡೆಸುತ್ತಾ ಕಾರವಾರ ಸಮೀಪ ಬಂದಾಗ ಬೋಟ್ ನ ಇಂಜಿನ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣವೇ ಸಮೀಪದಲ್ಲಿದ್ದ ವರದರಾಜ ಬೋಟ್ ನವರು ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಬೆಂಕಿಯನ್ನು ನಂದಿಸಲಾಯಿತು. ರಕ್ಷಿಸಲಾದ ಎಲ್ಲ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಕಾರವಾರದ ಬೈತಖೋಲ್ ಬಂದರಿಗೆ ಬೋಟ್ ಅನ್ನು ಎಳೆದು ತರಲಾಗಿದೆ.










