ಗ್ರೀನ್ ಜೋನ್ ಜಿಲ್ಲೆ ಉಡುಪಿಯಲ್ಲಿ ಆರು ಮಂದಿಯಲ್ಲಿ ಕೊರೋನ ಪಾಸಿಟಿವ್…

158
firstsuddi

ಉಡುಪಿ: ಹಸಿರು ಜಿಲ್ಲೆಯಾಗಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ದುಬೈನಿಂದ ಬಂದ ಆರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮೇ 15ರಂದು ದುಬೈ ನಿಂದ ಬಂದ ವಿಮಾನದಲ್ಲಿ ಉಡುಪಿ ಜಿಲ್ಲೆಯ 52 ಮಂದಿಯಿದ್ದು ಅವರನ್ನು ಹೊಟೇಲ್ ಮತ್ತು ಸರ್ಕಾರಿ ಕ್ವಾರಂಟೈನ್ ಮಾಡಲಾಗಿತ್ತು. ಅವರ ಗಂಟಲ ದ್ರವವನ್ನು ಮಂಗಳೂರಿಗೆ ಪರೀಕ್ಷೆಗಾಗಿ ರವಾನಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಅದರಲ್ಲಿ ಆರು ಮಂದಿಗೆ  ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. 

ಕಳೆದ 47 ದಿನಗಳಿಂದ ಯಾವುದೇ ಪಾಸಿಟಿವ್ ಕೇಸ್ ವರದಿಯಾಗದ ಉಡುಪಿಯಲ್ಲಿ ಇಂದು ಆರು ಪಾಸಿಟಿವ್ ಪ್ರಕರಣಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಅವರು ಉಳಿದುಕೊಂಡಿದ್ದ ಹೊಟೇಲ್‌ಗಳಿಂದ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿದು ಬಂದಿದೆ.