ಮುಂಬೈ: ಪ್ರೇಮಿಗಳಿಬ್ಬರು ಸ್ಕೂಟರ್ ಮೇಲೆ ಕುಳಿತು ಸ್ನಾನ ಮಾಡುತ್ತಿರುವ ಘಟನೆಯೊಂದು ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ ನಡೆದಿದೆ.
ಯುವಕ-ಯುವತಿ ಇಬ್ಬರು ನಡುರಸ್ತೆಯಲ್ಲೇ ಸ್ಕೂಟಿ ಮೇಲೆ ಕುಳಿತು ಸ್ನಾನ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
WeDeserveBetterGovt ಎಂಬ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿದ್ದು, ಉಲ್ಲಾಸ್‌ನಗರದ ಸೆಕ್ಟರ್ 17ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಈ ವೀಡಿಯೊದಲ್ಲಿ ಯುವಕ-ಯುವತಿ ಇಬ್ಬರೂ ಸ್ಕೂಟಿ ಮೇಲೆ ಕುಳಿತು ಬಕೆಟ್ ನಲ್ಲಿ ನೀರು ಸುರಿದುಕೊಳ್ಳುತ್ತಿದ್ದಾರೆ. ಇತರ ಸವಾರರು ವೀಕ್ಷಣೆ ಮಾಡುತ್ತಿರುವುದು ಕಂಡುಬಂದಿದೆ.
ಮುಂಬೈ ಸಮೀಪದ ಥಾಣೆಯಲ್ಲಿ ಘಟನೆ ನಡೆದಿದ್ದು, ವೀಡಿಯೊ ಗಮನಿಸುತ್ತಿದ್ದಂತೆಯೇ ಪೊಲೀಸರು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.










