ಚಾರಣಕ್ಕೆ ತೆರಳಿದ್ದ ಯುವಕ ಹೃದಯಾಘಾತದಿಂದ ನಿಧನ…

59
firstsuddi

ಮಡಿಕೇರಿ: ಚಾರಣಕ್ಕೆ ತೆರಳಿದ್ದ ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ತಾಲೂಕಿನ ತಡಿಯಂಡಮೋಳು ಬೆಟ್ಟದಲ್ಲಿ ನಡೆದಿದೆ.

ಜತಿನ್ ಕುಮಾರ್ (25) ಮೃತ ದುರ್ದೈವಿ. ಈತ ಹರಿಯಾಣ ಮೂಲದ ನಿವಾಸಿಯಾಗಿದ್ದಾನೆ. ಬೆಂಗಳೂರಿನ ಖಾಸಗಿ ಕಂಪನಿ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್, ತನ್ನ ಸ್ನೇಹಿತರೊಂದಿಗೆ ನಿನ್ನೆ ತಡಿಯಂಡಮೋಳು ಬೆಟ್ಟದ ವೀಕ್ಷಣೆಗೆ ತೆರಳಿದ್ದರು. ಬೆಟ್ಟದ ಮೇಲೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿದೆ. ಕೆಲಹೊತ್ತಿನಲ್ಲೇ ಎದೆ ನೋವು ಜಾಸ್ತಿ ಆಗಿ ಜತಿನ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಬಳಿಕ ಜತಿನ್ ಸ್ನೇಹಿತರು ಕೂಡಲೇ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅರಣ್ಯ ಇಲಾಖೆ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ತೆರಳಿ ನಂತರ ಬೆಟ್ಟದ ತುದಿಯಿಂದ ಕಚ್ಚಾರಸ್ತೆಯಲ್ಲಿ ಹರಸಾಹಸಪಟ್ಟು ಮೃತದೇಹವನ್ನು ಕೆಳಗೆ ತಂದಿದ್ದಾರೆ.

ಈ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.