ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು…

103
firstsuddi

ಕೊಟ್ಟಿಗೆಹಾರ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಂದಕಕ್ಕೆ ಉರುಳಿದ ಘಟನೆ ಚಾರ್ಮಾಡಿ ಘಾಟ್‍ನ ಮಲಯಮಾರುತ ಸಮೀಪ ಇಂದು ಬೆಳಗ್ಗೆ ನಡೆದಿದೆ.

ಕೋಲಾರದಿಂದ ಧರ್ಮಸ್ಥಳ ಕಡೆಗೆ ಸಾಗುತ್ತಿದ್ದ ಧರ್ಮಸ್ಥಳ ಮೂಲದ ಕಾರು ಚಾಲಕನ ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟ್‍ನ ಮಲಯಮಾರುತ ಸಮೀಪ ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಂದಕಕ್ಕೆ ಬಿದ್ದ ಕಾರನ್ನು ಸ್ಥಳೀಯರು ಹಾಗೂ ಪೋಲಿಸರ ಸಹಾಯದಿಂದ ಮೇಲೆತ್ತಲಾಯಿತು.