ಚಿಕ್ಕಮಗಳೂರಿನಲ್ಲಿ ಮೇ.28 ರಂದು ರಾಜ್ಯ ಮಟ್ಟದ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆ…

100
firstsuddi

ಚಿಕ್ಕಮಗಳೂರು : ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ಮೇ.28 ರಂದು ಜಿಲ್ಲೆಯಲ್ಲಿ “ವಿಲ್ಡರ್ ನೆಸ್ ರನ್ & ರೈಡ್” ಪುರುಷರು ಮತ್ತು ಮಹಿಳೆಯರ ರಾಜ್ಯ ಮಟ್ಟದ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆಯನ್ನು ಆಯೋಜಿಸಿದೆ.

5 ಕಿ.ಮೀ, 10 ಕಿ.ಮೀ, 21 ಮತ್ತು 42 ಕಿ.ಮೀ ವಿಭಾಗಗಳಲ್ಲಿ ಮ್ಯಾರಥಾನ್ ಹಾಗೂ 75 ಕಿ.ಮೀ, 45 ಕಿ.ಮೀ, 25 ಕಿ.ಮೀ ವಿಭಾಗಗಳಲ್ಲಿ ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿವೆ.

ಜೇನುಗದ್ದೆ ಸಮೀಪದ ಖಾಂಡ್ಯ ಪ್ಲಾಂಟರ್ಸ್ ಕ್ಲಬ್‍ನಿಂದ 28 ರಂದು ಬೆಳಿಗ್ಗೆ 5 ಗಂಟೆಗೆ ಮ್ಯಾರಥಾನ್ ಮತ್ತು 6.30ಕ್ಕೆ ಸೈಕ್ಲಿಂಗ್ ಸ್ಪರ್ಧೆಗಳು ಆರಂಭಗೊಳ್ಳಲಿವೆ.

ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವವರು ಮೇ.22ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ, ಹೆಚ್ಚಿನ ಮಾಹಿತಿಗೆ 8970724365 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸೈಕ್ಲಿಂಗ್ ಕ್ಲಬ್‍ನ ಅಧ್ಯಕ್ಷ ಎಂ.ಎ.ಸಂಜಿತ್ ಮನವಿ ಮಾಡಿದ್ದಾರೆ.