ಚಿಕ್ಕಮಗಳೂರು: ಅಪ್ಪ- ಮಗನ ಪಬ್ ಜಿ ಜಗಳದಲ್ಲಿ ಬಲಿಯಾದ ತಾಯಿ

95

ಚಿಕ್ಕಮಗಳೂರು : ಅಪ್ಪ ಮಗನ ಪಬ್ ಜೀ ಜಗಳದಲ್ಲಿ ಸ್ವತಃ ಅಮ್ಮನೇ ಬಲಿಯಾದ ದಾರುಣ ಘಟನೆ ತಾಲೂಕಿನ ಹಾಗಲಖಾನ್ ಎಸ್ಟೇಟ್​ ನಲ್ಲಿ ನಡೆದಿದೆ.

ಮೈಮುನಾ (40) ಮೃತ ದುರ್ದೈವಿ. ಪಬ್ ಜಿ ಆಡ ಬೇಡ ಎಂದು ಮಗನ ಜೊತೆ ಅಪ್ಪ ಇಮ್ತಿಯಾಜ್ ಜಗಳವಾಡುತ್ತಿದ್ದ. ಈ ವೇಳೆ ನಿನ್ನ ಸಾಯಿಸುತ್ತೇನೆಂದು ಮಗನಿಗೆ ತೋಟದ ಕೋವಿ ಹಿಡಿದು ಅಪ್ಪ ಹೆದರಿಸುತ್ತಿದ್ದ. ಅಲ್ಲದೇ ಕುಡಿದ ಮತ್ತಿನಲ್ಲಿದ್ದ ಅಪ್ಪ ಗುಂಡು ಹಾರಿಸಿದ್ದಾನೆ. ಈ ವೇಳೆ ಮಗನಿಗೆ ಗುಂಡು ಹೊಡೆಯುತ್ತಾರೆಂದು ತಾಯಿ ಎದುರು ಬಂದಿದ್ದಾಳೆ. ಅಪ್ಪ ಮಗನಿಗೆ ಹಾರಿಸಿದ ಗುಂಡು ತಾಯಿಗೆ ತಾಗಿದೆ.

ಹಿರಿಯ ಮಗ ತಕ್ಷಣ ಆಸ್ಪತ್ರೆಗೆ ಕರೆತಂದರೂ ಮೈಮುನಾ ಸಾವನ್ನಪ್ಪಿದ್ದಾರೆ. ಇಮ್ತಿಯಾಸ್​ ನನ್ನು ಬಂಧಿಸಲಾಗಿದೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.