ಚಿಕ್ಕಮಗಳೂರು : ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಉಪಚುನಾವಣೆ ನಿಂತಿದೆ ಎಂದು ಸಚಿವ ಸಿ.ಟಿ ರವಿ ಅವರು ಉಪಚುನಾವಣೆಯ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಇವರು, ಚುನಾವಣಾ ಆಯೋಗ ಉಪಚುನಾವಣೆಯನ್ನು ಘೋಷಣೆ ಮಾಡಿದೆ. ಆದರೆ ಉಪ ಚುನಾವಣೆಗೆ ಕೆಲವೊಂದು ತಾಂತ್ರಿಕ ತೊಡಕುಗಳಿವೆ. ಹಿಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ತೀರ್ಪಿನ ಮೇಲೆ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‍ಗೆ ಹೋಗಿದ್ದಾರೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇದೆ. ಹೀಗಿರುವಾಗ ಸುಪ್ರೀಂ ನೀಡುವ ತೀರ್ಪಿನ ಮೇಲೆ ಈ ಚುನಾವಣೆ ನಡೆಯುತ್ತೋ, ಇಲ್ಲವೋ, ನಡೆದರೆ ಯಾವಾಗ ಎನ್ನುವುದರ ಬಗ್ಗೆ ನಿರ್ಧಾರವಾಗಲಿದೆ. ಬಿಜೆಪಿ ಚುನಾವಣೆಗಳಿಗೆ ಸದಾ ಸಿದ್ದವಾಗಿದೆ. ಉಪಚುನಾವಣೆಗೆ ಮಾತ್ರವಲ್ಲ ಸಂಘಟನೆಯಿಂದಲೂ ಎಲ್ಲಾ ಹಂತದಲ್ಲಿ ತಯಾರಿ ನಡೆದಿರುತ್ತದೆ ಎಂದರು.










