ಚಿಕ್ಕಮಗಳೂರು : ಕರೋನಾ ಭಯವನ್ನೂ ಲೆಕ್ಕಿಸಿದೆ ಹೋಳಿ ಆಡಿದ ಕಾಫಿನಾಡಿಗರು…

835

ಚಿಕ್ಕಮಗಳೂರು: ಕರೋನಾ ಭಯ ಇಡೀ ವಿಶ್ವಕ್ಕೆ ವ್ಯಾಪಿಸಿದೆ. ಕರೋನ ಆತಂಕದಿಂದ ಸರ್ಕಾರ ಹೋಳಿ ಆಚರಣೆ ಬೇಡವೆಂದಿತ್ತು. ಆದ್ರೆ, ಕಾಫಿನಾಡಿಗರು ಕರೋನಾ ಭಯವನ್ನೂ ಲೆಕ್ಕಿಸದೆ ಹೋಳಿ ಆಡಿ ಸಂಭ್ರಮಿಸಿದ್ದಾರೆ. ನಗರದ ಓಂಕಾರೇಶ್ವರ ದೇವಾಲಯದ ಬಳಿ ನೂರಾರು ಯುವಕ-ಯುವತಿಯರು ಹೋಳಿ ಆಡಿ ಕುಣಿದು-ಕುಪ್ಪಳಿಸಿದ್ದಾರೆ. ಡ್ರಮ್ ಸೆಟ್ ಸೌಂಡ್‍ಗೆ ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಮನಸ್ಸೋ ಇಚ್ಛೆ ಕುಣಿದಿದ್ದಾರೆ. ಕರೋನಾ ಭಯದ ಮಧ್ಯೆಯೂ ಹೋಳಿ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.