ಚಿಕ್ಕಮಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ ಅವರು ಕಾಂಗ್ರೆಸ್ಸಿಗರಿಗೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ಸಿಗರೇ ನಿಮ್ಮದು ಕೇವಲ ರಾಜಕೀಯ ಅದನ್ನು ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಒಳ್ಳೆಯ ಸ್ಪರ್ಧೆ ಬೆಳೆಯುತ್ತದೆ. ನೀವು ತಾಕತ್ತಿರುವ ಜನರೇ ಇದ್ದೀರಾ. ನಿಮ್ಮ ಆಸ್ತಿ ಕೂಡಾ ಸಣ್ಣ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದು ಸದುಪಯೋಗ ಆಗಬೇಕೆಂದರೆ ನೀವು ಒಂದು ಪುಣ್ಯದ ಕೆಲಸ ಮಾಡಬೇಕು. ಟ್ವೀಟ್ ಮಾಡುವ ಬದಲು, 5-10-20 ಗ್ರಾಮಗಳನ್ನು ದತ್ತು ಪಡೆದುಕೊಳ್ಳಿ. ನೀವು 10ಗ್ರಾಮವನ್ನು ಪಡೆದರೆ, ಬಿಜೆಪಿ 20ಗ್ರಾಮ ಪಡೆಯುತ್ತಾರೆ. ಈ ವೇಳೆ ನಾವೇನಾದರೂ ಮಾಡಬೇಕು ಎಂದು ಜೆಡಿಎಸ್‍ನವರು 8-10 ಗ್ರಾಮವನ್ನು ಪಡೆಯುತ್ತಾರೆ. ಪ್ರಶ್ನೆ ಮಾಡುವ ಬದಲು ಈ ರೀತಿ ಆರೋಗ್ಯಕರ ಸ್ಪರ್ಧೆಯನ್ನು ಮಾಡಿ ಎಂದು ಮನವಿ ಮಾಡಿಕೊಂಡರು.










